Header Ads
Breaking News

ಕೊರೊನಾ ಸೋಂಕು ತಡೆಗಟ್ಟಲು ಲಾಕ್‍ಡೌನ್ ವಿಚಾರ : ಬಂಟ್ವಾಳದಲ್ಲಿ ಕ್ಯಾರೇ ಅನ್ನದ ಜನತೆ

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ ಗೆ ಆದೇಶ ನೀಡಿದರೂ ಬುದ್ದಿವಂತರ ಜಿಲ್ಲೆಯ ಬಂಟ್ವಾಳ ತಾಲೂಕಿನ ಜನ ಮಾತ್ರ ಕ್ಯಾರೇ ಎಂದಿಲ್ಲ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆಯುವಂತೆ ಸೂಚನೆ ನೀಡಿದರೂ ಕೂಡ ಹೆಚ್ಚಿನ ಅಂಗಡಿಗಳು ಬಾಗಿಲು ತೆರೆದಿದ್ದು ಜನದಟ್ಟಣೆಯೂ ಕಂಡು ಬಂತು. ಬಳಿಕ ತಹಶೀಲ್ದಾರ್ ರಶ್ಮಿ ಎಸ್ ಆರ್. ಅವರು ಸ್ವತಃ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರೆ ಪೆÇಲೀಸರು ಮೈಕ್ ಅನೌನ್ಸ್ ಮೆಂಟ್ ಮೂಲಕ ಅಗತ್ಯವಿಲ್ಲದ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಸರಕಾರ ಸೋಮವಾರವೂ ಲಾಕ್ ಡೌನ್ ಮಾಡುವಂತೆ ಆದೇಶಿಸಿತ್ತು. ಖಾಸಗಿ ಹಾಗೂ ಸರಕಾರಿ ಬಸ್ಸುಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ವಾಹನಗಳ ಸಂಚಾರ ಎಂದಿನಿಂತಯೇ ಇತ್ತು. ರಿಕ್ಷಾ, ಕಾರುಗಳ ಓಡಾಟ ಕಂಡು ಬಂತು. ಜವಳಿ ಅಂಗಡಿ, ಹಾರ್ಡ್ ವೇರ್ ಶಾಪ್, ಬೇಕರಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ಮೊದಲಾದ ಹೆಚ್ಚಿನ ಅಂಗಡಿಗಳು ವ್ಯಾಪಾರ ಆರಂಭಿತಿಸತ್ತು. ಸರಕಾರಿ ಕಚೇರಿಗಳು ತರೆದಿದ್ದವು. ಬಿ.ಸಿ.ರೋಡು,ಮೆಲ್ಕಾರ್,ಕೈಕಂಬ, ಬಂಟ್ವಾಳ, ಬಡ್ಡಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಜನಜಂಗುಳಿ ಕಂಡು ಬಂತು. ಗ್ರಾಮೀಣ ಭಾಗಳಲ್ಲಿಯೂ ಅಂಗಡಿಗಳು ಯಥಾವತ್ತಾಗಿ ವ್ಯಾಪಾರ ನಡೆಸಿವೆ.

Related posts

Leave a Reply

Your email address will not be published. Required fields are marked *