Header Ads
Breaking News

ಕೊರೋನಾ ವೈರಸ್‍ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ : 360 ಮಂದಿಯನ್ನು ಬಲಿಪಡೆದುಕೊಂಡ ಮಾರಕ ರೋಗ

ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, 360 ಮಂದಿಯನ್ನು ಬಲಿ ಪಡೆದಿರುವ ಮಾರಕ ರೋಗದ ಬಗ್ಗೆ ಜಾಗತಿಕ ಕಳವಳ ವ್ಯಕ್ತವಾಗಿದೆ.ಹಲವು ಸರ್ಕಾರಗಳು ಚೀನಾದ ಜನತೆಗೆ ಬಾಗಿಲು ಮುಚ್ಚಿವೆ. ಚೀನಾದ ಹೊರಗೆ ಮೊಟ್ಟಮೊದಲ ಕೊರೋನಾ ಸಾವಿನ ಪ್ರಕರಣ ಫಿಲಿಫೀನ್ಸ್‍ನಿಂದ ವರದಿಯಾಗಿದೆ.

ಚೀನಾದ ಆರೋಗ್ಯ ಆಯೋಗದ ಮೂಲಗಳ ಪ್ರಕಾರ, ವೈರಸ್ ಸೋಂಕು ಹರಡುವಿಕೆಯ ಮೂಲಸ್ಥಾನ ಹ್ಯುಬೀ ನಗರದಲ್ಲಿ ಮತ್ತೆ 56 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಚೀನಾದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 360 ತಲುಪಿದ್ದು, 2002-03ರಲ್ಲಿ ಸಾರ್ಸ್ ಸಾಂಕ್ರಾಮಿಕದಿಂದ 349 ಮಂದಿ ಮೃತಪಟ್ಟ ದಾಖಲೆಯನ್ನು ಕೊರೋನಾ ಅಳಿಸಿ ಹಾಕಿದೆ.ವೈರಸ್ ಸೋಂಕು ತಡೆಯಲು ಹೆಣಗಾಡುತ್ತಿರುವ ಅಧಿಕಾರಿಗಳು, ಪೂರ್ವದ ವೆಂಝೋಹು ನಗರದಲ್ಲಿ ರಸ್ತೆಗಳನ್ನು ಮುಚ್ಚಿ, ಜನ ಮನೆಗಳಿಂದ ಹೊರಬರದಂತೆ ಸೂಚಿಸಿದ್ದಾರೆ. ವೆಂಝೋಹು ನಗರ ವೂಹಾನ್‍ನಿಂದ 800 ಕಿಲೋಮೀಟರ್ ದೂರದಲ್ಲಿದೆ. ಚೀನಾದ ವೂಹಾನ್ ನಗರದಲ್ಲಿ ಕಾಣಿಸಿಕೊಂಡ ವೈರಸ್ ಸೋಂಕು ಇದೀಗ 16400 ಮಂದಿಗೆ ಹರಡಿದ್ದು, ಚೀನಾ ಹೊರತುಪಡಿಸಿ 24 ದೇಶಗಳಿಗೆ ಹಬ್ಬಿದೆ. ಜಿ-7 ದೇಶಗಳಲ್ಲಿ ಅಂದರೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟೆಲಿ, ಜಪಾನ್, ಬ್ರಿಟನ್ ಹಾಗೂ ಅಮೆರಿಕದಲ್ಲಿ ವೈರಸ್ ಸೋಂಕು ದೃಢಪಟ್ಟಿದೆ. ಎಲ್ಲರೂ ಸೇರಿ ಜಂಟಿ ಕ್ರಮ ಕೈಗೊಳ್ಳುವುದಾಗಿ ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಹೇಳಿದ್ದಾರೆ.

ಥಾಯ್ಲೆಂಡ್‍ನಲ್ಲಿ 19 ಪ್ರಕರಣಗಳು ದೃಢಪಟ್ಟಿದ್ದು, ಚೀನಾದ ಹಿರಿಯ ವ್ಯಕ್ತಿಯೊಬ್ಬರಿಗೆ ಫ್ಲೂ ಮತ್ತು ಎಚ್‍ಐವಿ ಔಷಧದ ಮಿಶ್ರಣವನ್ನು ನೀಡಿದ್ದರಿಂದ ಗಣನೀಯ ಸುಧಾರಣೆ ಕಂಡುಬಂದಿದೆ. 48 ಗಂಟೆಗಳ ಬಳಿಕ ಕೊರೋನಾ ನೆಗೆಟಿವ್ ಇರುವುದು ದೃಢಪಟ್ಟಿದೆ ಎಂದು ಥಾಯ್ಲೆಂಡ್ ಅಧಿಕಾರಿಗಳು ವಿವರಿಸಿದ್ದಾರೆ.

Related posts

Leave a Reply

Your email address will not be published. Required fields are marked *