Header Ads
Breaking News

ಕೊಲೊಂಬೋ ಭಯೋತ್ಪಾದನೆ ದಾಳಿ: ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿಕೆ

ಕೊಲಂಬೋ ಸುತ್ತಮುತ್ತ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ತಲುಪಿದೆ. ಮತ್ತಷ್ಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್  ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ 18 ಮಂದಿಯನ್ನು ಬಂಧಿಸಿದ್ದು, ಒಟ್ಟಾರೆಯಾಗಿ ವಶಕ್ಕೆ ಪಡೆದವರ ಸಂಖ್ಯೆ 58 ಆಗಿದೆ ಎಂದಿದ್ದಾರೆ.

ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರು ಪ್ರತಿಕ್ರಿಯೆ ನೀಡಿ ಇನ್ನೂ ಹಲವು ಶಂಕಿತರು ಸ್ಫೋಟಕಗಳೊಂದಿಗೆ ದೇಶದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಈಗ ಚರ್ಚ್ ಗಳು ಹಾಗೂ ಹೋಟೆಲ್ ಗಳು ಸೇರಿದಂತೆ ಇತರೆಡೆ ನಡೆದ ದಾಳಿಗಳು ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ದಾಳಿಗೆ ಪ್ರತೀಕಾರ ಹೇಳುವ ಸಲುವಾಗಿ ಕೈಗೊಂಡಿರುವಂಥವು ಎಂದು ಸರಕಾರದ ಉನ್ನತಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ದಾಳಿಕೋರರನ್ನು ಒಳಗೊಂಡ ಭಾವಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಬಾಂಬರ್ ಗಳಿಗೆ ಇರುವ ವಿದೇಶಿ ನಂಟಿನ ಬಗ್ಗೆ ತನಿಖಾಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *