Header Ads
Header Ads
Breaking News

ಏಕಾಂಗಿ ಬೈಕ್‍ಯಾನದ ಮೂಲಕ ನೇಪಾಳ ಸಂದರ್ಶನ : ಇದು ಕೊಲ್ಲೂರು ಅರ್ಚಕನ ಬೈಕ್ ರೈಡ್ ಕಹಾನಿ

ಆರತಿ ಘಂಟಾಮಣಿ ಹಿಡಿದು ಮೂಕಾಂಬೆಯ ಅರ್ಚನೆ ಮಾಡುವ ಅರ್ಚಕರ ಬೈಕ್ ರೈಡ್ ಕಹಾನಿ ಇದು. 21 ದಿನಗಳಲ್ಲಿ  10500 ಕಿ ಮೀ ಸಂಚರಿಸಿ ನೇಪಾಳ ವನ್ನು ಏಕಾಂಗಿಯಾಗಿ ಬೈಕ್ ಯಾನದ ಮೂಲಕ ಸಂದರ್ಶಿಸಿದ ಖ್ಯಾತಿ ಪಡೆಸಿದ್ದಾರೆ. ಇದು ಬಲು ಅಪರೂಪದ ಯಾತ್ರೆ ಕೊಲ್ಲೂರ್ ಟು ನೇಪಾಳ್….

ಇವರು ನಿತ್ಯಾನಂದ ಅಡಿಗ ದಕ್ಷಿಣ ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆಯ ಆನುವಂಶಿಕ ಅರ್ಚಕ ಕುಟುಂಬದ ಸದಸ್ಯ. ಮೈಸೂರಿನಲ್ಲಿ ವೇದಾಧ್ಯಯನ ಮಾಡಿ ತನ್ನ ಕುಟುಂಬದ ಮೂಲ ಆಶಯ ನೆರವೇರಿಸಿದ್ರು. ಬಿಬಿಎಂ ಪದವಿ ಬಳಿಕ ಎಂಬಿಎ ಮಾಡಿ ಸ್ನಾತಕೋತ್ತರ ಪಧವೀಧರರಾದ್ರು. ಇವಿಷ್ಟು ಇವರ ಕ್ವಾಲಿಫಿಕೇಶನ್ ಡೀಟೈಲ್ಸ್. ಆದ್ರೆ ಅವರಿಗೆ ಬೈಕ್ ಮೂಲಕ ನೇಪಾಳ ಯಾತ್ರೆ ಮಾಡೋದು ದೊಡ್ಡ ಕನಸಾಗಿತ್ತು. ಅಮ್ಮ ಮೂಕಾಂಬಿಕೆಯ ಪೂಜೆ ಮಾಡ್ತಾ ತನ್ನ ನೇಪಾಳ ಯಾತ್ರೆಗೆ ಸಿದ್ಧರಾದ್ರು. ಇವರ ನೆಚ್ಚಿನ ಹಾರ್ಲೇ ಡೇವಿಡ್ ಸನ್ ಬೈಕ್ ನಲ್ಲಿ ಬಾಂಗ್ಲಾ ನೇಪಾಳ ಭೂತಾನ್ ಯಾತ್ರೆ ಆರಂಭಿಸಿಯೇ ಬಿಟ್ರು. ಹೇಳಿ ಕೇಳಿ ಶುದ್ಧ ಸಸ್ಯಾಹಾರಿ ಉತ್ತರ ಭಾರತ ದಾಟಿದ ಬಳಿಕ ಆಹಾರ ಸಮಸ್ಯೆ ಹೀಗೆ ಹಲವು ಎಡರು ತೊಡರುಗಳ ಮಧ್ಯೆ ಭಾರತ ಬಾಂಗ್ಲಾ ಗಡಿ ದಾಟಿದ್ರು ಅಡಿಗ್ರು.

 ಬಾಂಗ್ಲಾ ದೇಶದ ಮೋಟಾರು ಕಾಯಿದೆಯ ಕಾರಣ ಡಾಕಾ ಬೇಟಿ ಮಾಡಲಾಗದೆ ನೇಪಾಳ ಮತ್ತು ಭೂತಾನ್ ದೇಶವನ್ನು ಸಂದರ್ಶಿಸಿದ್ರು. ಅಂತೂ ಏಕಾಂಗಿಯಾಗಿ ತನ್ನ ಹಾರ್ಲೇ ಬೈಕ್ ಮೂಲಕ ಸತತ 21 ದಿನಗಳಲ್ಲಿ 10500 ಕಿಮೀ ಸಂಚರಿಸಿ ಯಶಸ್ವಿ ಯಾತ್ರೆಗೈದ ನಿತ್ಯಾ ಅಡಿಗರ ಬಗ್ಗೆ ಅವರ ಸ್ನೇಹಿತರಿಗೆ ಅಪಾರ ಅಭಿಮಾನವಿದೆ. ಶಿಸ್ತು ಬದ್ಧ ಮತ್ತು ಸಮರ್ಪಣಾ ಭಾವದ ಮೂಲಕ ಹಲವು ದಿನಗಳ ಕನಸನ್ನು ಅಡಿಗರು ಸಂಪನ್ನಗೊಳಿಸಿದ್ರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನಿತ್ಯ ಅರ್ಚಕ ವೃತ್ತಿಯನ್ನು ಮಾಡುತ್ತಾ ಅದ್ಭುತವಾದ ಸಾಧನೆ ಮಾಡಿದ ಅಡಿಗರ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ ದೊರೆತಿದೆ.ಭೂತಾನ್ ದೇಶದ ಅದ್ಭುತವಾದ ಪರಿಸರ ಕಾಳಜಿಯನ್ನು ಬಹಳವಾಗಿ ಮೆಚ್ಚಿರುವ ಅಡಿಗರು ನಾವೂ ಅವರಂತೆ ಹಸಿರು ಕ್ರಾಂತಿಗೆ ಪಣತೊಡಬೇಕೆಂದು ಹೇಳುತ್ತಾರೆ. ಭೂತಾನ್ ಇಡೀ ದೇಶದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು, ಜನರ ಸೌಮ್ಯ ನಡೆಗೆ ಅಡಿಗರು ಮಾರುಹೋಗಿದ್ದಾರೆ. ಒಂದು ವೃತ್ತಿ ಬದುಕಿಗಾಗಿ , ಪ್ರವೃತ್ತಿ ಬದುಕಿನ ಏಕತಾನತೆಯನ್ನು ಕಳೆಯುವುದಕ್ಕೆ . ಈ ರೀತಿ ವೃತ್ತಿಯೊಂದಿಗೆ ಒಂದು ಒಳ್ಳೆಯ ಪ್ರವೃತ್ತಿಯ ಮೂಲಕ ಅಡಿಗರು ಮಾದರಿ ಸಾಹಸವನ್ನು ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *