Header Ads
Header Ads
Breaking News

ಕುಮಾರಧಾರಾ ತ್ಯಾಜ್ಯನೀರು ಶುದ್ಧೀಕರಣ ಘಟಕದ ಗುಣಮಟ್ಟ ಪರಿಶೀಲನೆಯಾಗಬೇಕು: ನೀತಿ ತಂಡ ಆಗ್ರಹ

ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜಿನ ಬಳಿ ನಿರ್ಮಿಸಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಣಗೊಳ್ಳದೆ ಕೊಳಚೆ ನೀರು ನೇರವಾಗಿ ಪವಿತ್ರ ಕುಮಾರಧಾರ ನದಿ ನೀರಿಗೆ ಸೇರುತ್ತಿರುವ ಬಗ್ಗೆ ಹಾಗೂ ಒಳಚರಂಡಿ ಇಲಾಖೆ ನಿರ್ಮಿಸಿರುವ ಶುದ್ಧೀಕರಣ ಘಟಕದ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ಆಗಬೇಕು ಎಂದು ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಹೊಟೇಲ್, ಲಾಡ್ಜ್, ಮಠಗಳಿಂದ ಬರುವ ಕಲುಷಿತ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೇ ನೇರವಾಗಿ ಕುಮಾರಧಾರ ನದಿಗೆ ಹರಿಯಲು ಬಿಡೋದ್ರಿಂದ ಪವಿತ್ರವಾದ ನದಿಯ ನಿರು ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಶುದ್ಧೀಕರಣ ಘಟಕದ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಬೇಕು. ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭ ನೀತಿ ತಂಡದ ರಂಜಿತ್, ಲಿನ್ಸಿ ವಾರ್ಗಿಸ್, ಬಾಲ್ ರಾಜ್, ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *