Header Ads
Header Ads
Breaking News

ಕೋರಿರೊಟ್ಟಿಯ ನಟನಿಂದ ಬೆಲ್ಚಪ್ಪ:ಯುಗಾದಿಗೆ ರಿಲೀಸ್ ಆಗಲಿರುವ ಹಾಸ್ಯಮಯ ಚಿತ್ರ

ಕೋರಿರೊಟ್ಟಿ ಚಿತ್ರದ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಜನೀಶ್ ದೇವಾಡಿಗ ಮತ್ತೊಂದು ವಿಭಿನ್ನ ತುಳುಚಿತ್ರ ರಚನೆಗೆ ಮುಂದಾಗಿದ್ದಾರೆ.ಈ ಬಾರಿ ಸಂಪೂರ್ಣ ಹಾಸ್ಯಮಯ, ಕೌಟುಂಬಿಕ ಚಿತ್ರ ನಿರ್ಮಿಸಲು ಮುಂದಾಗಿದ್ದು ಬೆಳ್ಚಪ್ಪ ಹೆಸರಿನ ತುಳು ಚಿತ್ರಕ್ಕೆ ಇಂದು ಮುಹೂರ್ತ ನಡೆಯಿತು.ಜಯದುರ್ಗಾ ಪ್ರೊಡೆಕ್ಷನ್ ಬ್ಯಾನರ್ ಅಡಿಯಲ್ಲಿ ನೂತನ ತುಳು ಚಿತ್ರಕ್ಕೆ ಇಂದು ಉಡುಪಿಯ ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಕೋರಿ ರುಟ್ಟಿ ಚಿತ್ರ ಖ್ಯಾತಿಯ ನಿರ್ದೇಶಕ, ನಟ ರಜನೀಶ್ ದೇವಾಡಿಗ ಮತ್ತೊಂದು ವಿಭಿನ್ನ ತುಳು ಚಿತ್ರ ರಚನೆಯ ಸಾಹಸಕ್ಕೆ ಕೈ ಹಾಕಿದ್ದು ಈ ಚಿತ್ರಕ್ಕೆ ಕನ್ನರಪಾಡಿ ಜಯದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅದ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕ್ಯಾಮರಾ ಚಾಲನೆ ಮಾಡಿದರು. ಆರಂಭ ಫಲಕಕ್ಕೆ ಉದ್ಯಮಿ ಪ್ರಕಾಶ್ ನಾಯಕ್ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದ ಮೊದಲ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡಲಾಯಿತು. ಕ್ಯಾಮರಾಕ್ಕೆ ಚಾಲನೆ ನೀಡಿದ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ ರಜನೀಶ್ ದೇವಾಡಿಗ ಹಾರ್ಡ್ ವರ್ಕರ್… ಸಾಧನೆಗಾಗಿ ಕಷ್ಟಪಟ್ಟ ಪಟ್ಟಿದ್ದಾರೆ. ಅವರು ಪಟ್ಟ ಶ್ರಮಕ್ಕೆ ಕೋರಿ ರುಟ್ಟಿ ಚಿತ್ರ ಸ್ವಲ್ಪ ಯಶಸ್ಸು ಸಿಕ್ಕಿದೆ. ಮುಂದಿನ ಬೆಲ್ಚಪ್ಪ ಚಿತ್ರದ ಮೂಲಕ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು. ಈ ಚಿತ್ರದ ಪ್ರಮುಖ ಕೇಂದ್ರ ಬಿಂದು ಹಾಸ್ಯ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ವಿಭಿನ್ನ ಕಥೆ ಇರುವ ಈ ಚಿತ್ರ ನನಗೆ ಇಷ್ಟವಾಯಿತು. ಕ್ಯಾಮರಾ ಮೆನ್ ಸೇರಿದಂತೆ ಇಡೀ ಚಿತ್ರತಂಡ ನನಗೆ ಪರಿಚಯ ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ. ದೇವರ ಆಶೀರ್ವಾದ ವಿದ್ದರೆ ಚಿತ್ರ ಯಶಸ್ಸಾಗಲು ಯಾವುದೇ ಸಮಸ್ಯೆ ಇಲ್ಲ. ದೇವರ ಸನ್ನಿದಿಯಲ್ಲಿ ಆರಭವಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳು ಹಾರೈಸಬೇಕು ಅಂತ ಮನವಿ ಮಾಡಿದರು. ಸಮಾರಂಭದಲ್ಲಿ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ರಮೇಶ್ ಶೆಟ್ಟಿ, ಮನೋ ವೈದ್ಯ ಡಾ.ಪಿವಿ ಭಂದಾರಿ, ನಗರಸಭಾ ಸದಸ್ಯ ವಿಜಯ್ , ನಾಯಕ ನಟಿ ಯಶಸ್ವಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು. ಚಿತ್ರದ ಸುಮಾರು ೩೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ಯುಗಾದಿಗೆ ಚಿತ್ರ ಬಿಡುಗಡೆ ಮಾಡುವ ಯೋಜನೆಯನ್ನ ಚಿತ್ರ ತಂಡ ಹೊಂದಿದೆ.

Related posts

Leave a Reply