Header Ads
Breaking News

ಕೋವಿಡ್ ವಾರಿಯರ್ಸ್ ಅಭಿನಂದನೆ ಅಬ್ಬಕ್ಕ ಸಮಿತಿಯ ಗೌರವ ಇಮ್ಮಡಿಯಾಗಿದೆ : ಪ್ರೋ. ಪಿ.ಎಸ್ ಯಡಪಡಿತ್ತಾಯ ಹೇಳಿಕೆ

ಉಳ್ಳಾಲ : ಅನ್ಯರ ಆರೋಗ್ಯ ರಕ್ಷಣೆಯ ಪಣತೊಟ್ಟು ಕೆಲಸ ಮಾಡಿದ ಕೋವಿಡ್ ವಾರಿಯರ್ಸ್‍ಗಳನ್ನು ಗುರುತಿಸಿ ಅಭಿನಂದಿಸಿದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಇಮ್ಮಡಿಯಾಗಿದೆ ಎಂದು ಮಂಗಳೂರು ವಿ.ವಿ ಕುಲಪತಿ  ಪ್ರೋ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮತ್ತು ಕೆಆರ್ ಇಸಿ/ಎನ್‍ಐಟಿಕೆ-76 ಸಹಯೋಗದಲ್ಲಿ ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆದ ಸೇವಾಭಿನಂದನೆಯಲ್ಲಿ ಅವರು ಅಭಿನಂದನಾ ಮಾತುಗಳನ್ನಾಡಿದರು.ಈ ಸಂದರ್ಭ ಕೋವಿಡ್ ವಾರಿಯರ್ಸ್‍ಗಳನ್ನು ನಗರಸಭಾ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.ನಿವೃತ್ತ ಶಿಕ್ಷಕರಾದ ಎಂ. ವಾಸುದೇವ ರಾವ್, ಡಿ.ಎನ್. ರಾಘವ, ಸರೋಜ ಕುಮಾರಿ, ಲೀಲಾವತಿಎಮ್ ಹಾಗೂ ಆನಂದ ಕೆ. ಅಸೈಗೋಳಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ದ.ಕ ಜಿಲ್ಲಾ ಪಂಚಾಯಿತಿ ಸ್ಥಾಯಿ, ಶಿಕ್ಷಣ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ನರ ಪುಣ್ಯ ಕ್ಷೇತ್ರದ ಧರ್ಮಗುರು ರೆ.ಫಾ. ಸಿಪ್ರಿಯನ್ ಪಿಂಟೋ, ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *