Header Ads
Breaking News

ಕೋವಿಡ್-19 ಕುರಿತಾಗಿ ಜಾಗೃತಿ ಅಭಿಯಾನ : ಕಾರ್ಕಳದ ಮಿನಿ ವಿಧಾನಸೌಧ ವಠಾರದಲ್ಲಿ ಚಾಲನೆ

ಕಾರ್ಕಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಕಾರ್ಕಳ ಪುರಸಭೆ ಮತ್ತು ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಇದರ ವತಿಯಿಂದ ನೋವೆಲ್ ಕೋರನ ಕೋವಿಡ್- 19 ಕುರಿತಾಗಿ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಮಿನಿ ವಿಧಾನಸೌಧದ ವಠಾರದಲ್ಲಿ ಸಹಾಯಕ ಕಮಿಷನರ್ ಕುಂದಾಪುರ ಉಪವಿಭಾಗ ರಾಜು ಕೆ. ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮಗೆ ಗೊತ್ತಿರುವ ಹಾಗೆಕೊರೊನ ವೈರಸ್ ಜಗತ್ತಿನಲ್ಲಿ ಹರಡಿದೆ. ನಮಗೆ ಗೊತ್ತಿರುವ ಹಾಗೆ ಇಟಲಿ ಹಾಗೂ ಚೀನಾ ದಲ್ಲಿ ಸಾವಿರಾರು ಜೀವಗಳನ್ನು ಬಲಿ ಪಡೆದ ಬಗ್ಗೆ ನಮಗೆಲ್ಲ ಗೊತ್ತಿದ್ದ ವಿಷಯ ಹಾಗೆ ಭಾರತದಲ್ಲಿ ಆಗಲಿ ನಮ್ಮ ಪ್ರದೇಶದಲ್ಲಿ ಆಗಲಿ ಆಗೋದು ಬೇಡ. ನಾವು ಸ್ವಲ್ಪ ದಿನದ ಮಟ್ಟಿಗೆ ಮನೆಯಿಂದ ಹೊರಗೆ ಬರುವುದು ಬೇಡ ನಮಗೆ ಬೇಕಾದ ಅಗತ್ಯವಾದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಹಬ್ಬಹರಿದಿನ ನಮಗೆ ಮುಂದಿನ ವರ್ಷ ಸಿಗಬಹುದು ಆದರೆ ನಮ್ಮ ಅಮೂಲ್ಯ ಜೀವ ಹೋದರೆ ಮತ್ತು ಸಿಗಲಾರದು. ಯಾರಾದರೂ ಕಾನೂನನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆಗೆ ಒಳಪಡಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪುರಂದರ ಹೆಗಡೆ, ತಾಲೂಕು ನಿರ್ವಹಣಾಧಿಕಾರಿ ಮೇಜರ್ ಹರ್ಷ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ, ಪುರಸಭಾಧಿಕಾರಿ ರೇಖಾ ಶೆಟ್ಟಿ, ಧ್ವನಿ-ಬೆಳಕು ಸಂಯೋಜಕರ ಅಧ್ಯಕ್ಷರಾದ ಜಗದೀಶ್ ಆಚಾರ್ಯ, ಪುರಸಭೆ ಸಿಬ್ಬಂದಿಗಳು, ಪೆÇಲೀಸ್ ಪೆÇಲೀಸ್ ಸಿಬ್ಬಂದಿ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *