Header Ads
Breaking News

ಕೋವಿಡ್-19 ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಹರೈನ್ ಇದರ ಆಶ್ರಯದಲ್ಲಿ ಕೋವಿಡ್-19ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯಕ್ರಮ ಮಂಗಳೂರು ನಗರದ ವೆಲೆನ್ಸಿಯಾದಲ್ಲಿರುವ ಕೋಟೆ ಮ್ಯಾನ್ಷನ್‌ನಲ್ಲಿ ನಡೆಯಿತು.ಸುಮಾರು 100ಜನರಿಗೆ ಕೋವಿಡ್-19 ಸಂತ್ರಸ್ತ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಕರ್ನಾಟಕ ಎನ್.ಆರ್.ಐ.ಫೋರಂ ಬಹರೈನ್‌ನ ಅಧ್ಯಕ್ಷ ಲೀಲಾಧರ ಬೈಕಂಪಾಡಿ ಸಂತ್ರಸ್ತರಿಗೆ ಕಿಟ್ ವಿತರಿಸಿ ಮಾತನಾಡಿ 28ವರ್ಷ ಗಳಿಂದ ಕರ್ನಾಟಕ ರಾಜ್ಯದ ಜನತೆಗೆ ಬೇಕಾಗಿ ಬಹರೈನ್ ನಲ್ಲಿ ದುಡಿಯುತ್ತಿರುವ ಸಂಸ್ಥೆ ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ಯಾಗಿದೆ.ಇದೊಂದು ಮಾನವೀಯ ನೆಲೆಗಟ್ಟಿನ ಕಾರ್ಯಕ್ರಮ. 28ವರ್ಷ ಗಳಿಂದ ಬೇರೆ ಬೇರೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವ ಈ ಸಂಸ್ಥೆ, ಸಮಾಜದ ದೀನದಲಿತರ ಬಗ್ಗೆ ಸ್ಪಂದಿಸುವ ಕೆಲಸ ಸದಾ ಮಾಡುತ್ತಿದೆ. ನೊಂದವರ ಬಾಳಿಗೆ ಬೆಳಕಾಗುವ ಕೆಲಸ ಶ್ಲಾಘನೀಯ ಎಂದರು.ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ .ಕೆ.ಪಿ.ಮಂಜುನಾಥ್ ಸಾಗರ್ ಭಾಗವಹಿಸಿ ಮಾತನಾಡಿ ಕೋವಿಡ್ ಪ್ರಾರಂಭದಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ಅಹಾರ ಕಿಟ್ ಹಂಚಿದೆ ಅದರೆ ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕೋವಿಡ್ ಪ್ರಾರಂಭದಿಂದ ಇಂದಿನ ವರೆಗೆ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇದು ನಿಜವಾದ ಸೇವೆಯಾಗಿದೆ ಎಂದು ಹೇಳಿದರು.ಮಾಜಿ ಮೇಯರ್ ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೆ ಪ್ರಚಾರವಿಲ್ಲದೆ ಶಿರೂರುನಿಂದ ಗ್ರಾಮಿಣ ಪ್ರದೇಶವಾದ ಬೆಳ್ತಂಗಡಿ ಭಾಗದ ಬಡ ಅರ್ಹರಿಗೆ ನಿರಂತರವಾಗಿ ಸಹಾಯ ಮಾಡುತ್ತ ಬಂದಿದೆ ಇದು ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರು.ಮಂಗಳೂರಿನ ಮಾಜಿ ಉಪಮೇಯರ್ ಸಲೀಂ,ದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಉಮ್ಮರ್ ,ಸ್ಥಾಪಕ ಸದಸ್ಯ ಮೊದ್ದೀನ್, ಕಾರ್ಯಕ್ರಮ ಸಂಯೋಜಕ ಮುಬಾರಕ್ ಮುಖ್ಯ ಅತಿಥಿಗಳಾಗಿದ್ದರು. ಬಂದರು ವ್ಯಾಪಾರಿ ಮೊಹಿಸಿನ್ ಬಾವ . ಸಯ್ಯದ್ ಬಹರೈನ್. ಸಾಹಿತಿ ಡಾ.ಕಾಸರಗೋಡು ಅಶೋಕ್ ಕುಮಾರ್ ಉಪಸ್ಥಿತರಿದರು.

Related posts

Leave a Reply

Your email address will not be published. Required fields are marked *