Header Ads
Breaking News

ಕಡಿಮೆ ವೆಚ್ಚದ 3ಡಿ ಮೆಟಲ್ ಮುದ್ರಕದ ನಿರ್ಮಾಣ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವೈಮಾನಿಕ ವಿಭಾಗದ ವಿದ್ಯಾರ್ಥಿಗಳು ಮೂರು ಅಯಾಮದ 3ಡಿ ಮೆಟಲ್ ಫ್ರಿಂಟರ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ಸಂಯೋಜಿತ ಠೇವಣಿ ಮಾದರಿಯ ಉತ್ಪಾದನಾ ಪ್ರಕ್ರಿಯೆಯಾಗಿದೆ. ಈ ಸಂಯೋಜಿತ ಠೇವಣಿ ಮಾದರಿಯಲ್ಲಿ ಕರಗಿದ ವಸ್ತುವನ್ನು ಪೂರ್ವನಿರ್ಧಾರಿತ ಪಥದಲ್ಲಿ ಹರಿಸಿ ಪದರದ ಮೂಲಕ ಮಾದರಿಯನ್ನು ನಿರ್ಮಿಸಿದ್ದಾರೆ.

ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯ ಪ್ರಾಜೆಕ್ಟ್‌ಗಳನ್ನು ತಯಾರಿಸಿ ವಿನೂತನ ಸಾಧನೆ ಮಾಡುತ್ತಿದ್ದಾರೆ. ಇದೀಗ ಮಗದೊಂದು ಕ್ರಾಂತಿಕಾರಿ ಕಡಿಮೆ ವೆಚ್ಚದ 3ಡಿ ಮೆಟಲ್ ಮುದ್ರಕದ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುದ್ರಕದ ಬಗ್ಗೆ ಪ್ರೊ. ದೀಪಕ್ ರಾಜ್ ಪಿ. ವೈ ಅವರು ಈ 3ಡಿ ಪ್ರಿಂಟರ್‌ನ್ನು ವಿವಿಧ ಸಂಯೋಜಿತ ಮತ್ತು ಸಂಕೀರ್ಣ ಭಾಗಗಳನ್ನು ಮುದ್ರಿಸಲು ಬಳಸಬಹುದು ಮತ್ತು ಇದು ಯಂತ್ರಗಳಲ್ಲಿ ಬಳಸುವ ಅನೇಕ ಘಟಕಗಳು ಮತ್ತು ಕೀಲುಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಮುದ್ರಕವನ್ನು ಎಂಜಿನಿಯರಿಂಗ್ ಮಾತ್ರವಲ್ಲದೆ, ಡಿಸೈನರ್‌ಗಳು, ವಾಸ್ತುಶಿಲೆ, ಕಲಾತ್ಮಕ ಮೂರ್ತಿಗಳು ಹಾಗೂ ಇನ್ನಿತರ ವಸ್ತೂಗಳನ್ನೂ ಸಹ ಕೈಗೆಟಕುವ ಬೆಲೆಯಲ್ಲಿ ತಯಾರಿಸಲು ಉಪಯೋಗಿಸಬಹುದು ಎಂದು ವಿವರಿಸಿದರು.

3ಡಿ ಮೆಟಲ್ ಮುದ್ರಕದ ನಿರ್ಮಾಣದ ಮಾದರಿಯಲ್ಲಿ ಲೋಹದ ಒಳನುಗ್ಗಿಸುವಿಕೆಯ ಪೋಲ್ಡಿಂಗ್ ಫೀಡ್ ಸ್ಟಾಕ್ ಅನ್ನು ಬಳಸುವುದು ಒಂದು ದೊಡ್ಡ ಸವಾಲಾಗಿತ್ತು ಎಂದು ವಿದ್ಯಾರ್ಥಿ ಜುನೈದ್ ಎ ವಿವರಿಸುತ್ತಾರೆ. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಅಭಿಷೇಕ್ ಎ., ಜುನೈದ್ ಎ ಮತ್ತು ಸೌಮ್ಯ ಬಿ. ಉಪಸ್ಥಿತರಿದ್ದರು.ಕ್ರಾಂತಿಕಾರಿ ಕಡಿಮೆ ವೆಚ್ಚದ 3ಡಿ ಮೆಟಲ್ ಮುದ್ರಕದ ನಿರ್ಮಾಣದಲ್ಲಿ 4ನೇ ವರ್ಷದ ವೈಮಾನಿಕ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಎ., ಜುನೈದ್ ಎ ಮತ್ತು ಸೌಮ್ಯ ಬಿ. ಅವರು ತಮ್ಮ ಪಠ್ಯ ಕ್ರಮದ ಭಾಗವಾಗಿ ಈ ಮಾದರಿಯನ್ನು ತಯಾರಿಸಿದ್ದಾರೆ.

Related posts

Leave a Reply

Your email address will not be published. Required fields are marked *