

ಉಜಿರೆ: ವಿದ್ಯಾರ್ಥಿಗಳ ಕ್ರಿಯಾತ್ಮಕತೆ ಹಾಗೂ ಸೃಜನಶೀಲತೆ ಆಭಿವೃದ್ಧಿಗೆ ಗಣೀತಶಾಸ್ತ್ರ ಸಹಕಾರಿ ಎಂದು ಹಿರಿಯ ಸಂಶೋಧಕ ಹಾಗೂ ಪ್ರಾದ್ಯಾಪಕ, ಸಿ ಆರ್ ಪ್ರದೀಪ ಇಲ್ಲಿನ ಎಸ್ ಡಿ ಎಂ ಕಾಲೇಜಿನ ಗಣಿತಶಾಸ್ತ್ರ ವಿಭಾಗ, ಐಕ್ಯೂಎಸಿ ಹಾಗೂ ಪಿಳಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಡೆದ ವೆಬಿನಾರಿನಲ್ಲಿ ನುಡಿದರು.ಮೂಲವಿಜ್ಞಾನವನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದ ಈ ವೆಬಿನಾರಿನಲ್ಲಿ ಉಪನ್ಯಾಸ ಕೊಡುತ್ತಾ ಅವರು, ವಿವಧ ಮಾದರಿಯ ಮಾಯಾಚೌಕದ ತಯಾರಿ, ಚದುರಂಗದ ಕಾಯಿಗಳ ಚಲನಾ ವಿಧಾನ ಕುರಿತ ಸಮಸ್ಯೆಗಳನ್ನು ಹಾಗೂ ವಿದ್ಯಾರ್ಥಿಗಳು ಹೇಗೆ ಕ್ರಿಯಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿವರಿಸಿದರು.ತಾಲೂಕಿನ ವಿವಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಗಣೇಶ್ ನಾಯಕ್ ಸ್ವಾಗತಿಸಿ, ಪೂಜಿತಾ ವರ್ಮ ಜೈನ್ ನಿರೂಪಿಸಿ, ಅಕ್ಷತಾ ಬಿ ವಂದಿಸಿದರು.