Header Ads
Breaking News

ಕ್ರೈಸ್ತ ಬಾಂಧವರ ಮೋಂತಿ ಫೆಸ್ಟ್‍ಗೂ ಕೋವಿಡ್ ಎಫೆಕ್ಟ್

ಕ್ರೈಸ್ತ ಬಾಂಧವರಿಗೆ ಮೋಂತಿ ಫೆಸ್ಟ್ ಒಂದು ಪವಿತ್ರ ಹಬ್ಬ. ಕನ್ಯಾ ಮರಿಯಮ್ಮಳ ಜನ್ಮ ದಿನವನ್ನು ಕ್ರೈಸ್ತ ಬಾಂಧವರು ತೆನೆ ಹಬ್ಬದ ಮೂಲಕ ಸಂಭ್ರಮದಿಂದ ಆಚರಿಸುತ್ತಾರೆ. ಆದ್ರೆ ಈ ಬಾರಿ ಆ ಸಂಭ್ರಮ ಮರೆಯಾಗಿದೆ. ಕಾರಣ ಕೋವಿಡ್ ಎಫೆಕ್ಟ್. ಬರೀ ಸಂಪ್ರದಾಯಕ್ಕೆ ಮಾತ್ರ ಈ ಬಾರಿಯ ತೆನೆ ಹಬ್ಬ ಸೀಮಿತವಾಯಿತು.

 ಕೊರೋನಾ ಕಾರಣದಿಂದ ಈಗಾಗಲೇ ಅನೇಕ ಹಬ್ಬಗಳು ನೀರಸವಾಗಿ ಸಂಪನ್ನಗೊಂಡಿದೆ. ಇಂದು ಕ್ರೈಸ್ತ ಬಾಂಧವರಿಗೆ ಸಂಭ್ರಮದ ಮೋಂತಿ ಫೆಸ್ಟ್.. ಆದ್ರೆ ಈ ಹಬ್ಬಕ್ಕೂ ಕೊರೊನಾ ಕಾಟ ನೀಡಿದೆ. ಪ್ರತೀ ವರ್ಷ ಮಕ್ಕಳು ಹೂವುಗಳನ್ನು ಹಿಡಿದು ಅದನ್ನ ಬಳಿಕ ಕನ್ಯಾಮರಿಯಮ್ಮಳಿಗೆ ಅರ್ಪಿಸುತ್ತಾರೆ. ಆದ್ರೆ ಈ ಬಾರಿ ಮಾತ್ರ ಅಂತಹ ದೃಶ್ಯಾವಳಿಗಳು ಕಂಡು ಬರಲಿಲ್ಲ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಪ್ರತೀ ವರ್ಷ ಸಂಭ್ರಮದಲ್ಲಿ ಈ ಮೋಂತಿ ಫೆಸ್ಟ್ ನಡೆಸುತ್ತಾರೆ.. ಆದ್ರೆ ಈ ಬಾರಿ ಕಾರ್ಯಕ್ರಮಕ್ಕೆ ಸೀಮಿತವಾದ ಜನರಿಗೆ ಆಹ್ವಾನ ಇತ್ತು. ಮಕ್ಕಳು, ವೃದ್ದರಿಗೆ ಅವಕಾಶ ಇರಲಿಲ್ಲ. ಆದ್ದರಿಂದ ಬರೇ ಸಂಪ್ರದಾಯವನ್ನು ಮಾತ್ರ ನಡೆಸಲಾಯಿತು.

 ಕರಾವಳಿಯಲ್ಲಿ ಮೇರಿ ಮಾತೆಯ ಜನುಮ ದಿನವನ್ನು ಹೊಸ ಬೆಳೆಯ ಹಬ್ಬವಾಗಿ ಆಚರಿಸಲಾಗುತ್ತದೆ. ಭತ್ತದ ಹೊಸ ಬೆಳೆ ಬಂದಾಗ ಅದನ್ನು ರೈತರು ಹೊಸ ಬೆಳೆಯ ಹಬ್ಬವಾಗಿ ಆಚರಿಸುವುದು ಕರಾವಳಿಯ ಸಂಪ್ರದಾಯ. ಇದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿರದೇ ಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರು ಕೂಡಾ ಈ ಹೊಸ ಹಬ್ಬವನ್ನು ಸಂಬ್ರಮದಿಂದ ಆಚರಿಸಿಕೊಳ್ಳುತ್ತಾರೆ. ತಮ್ಮ ಹೊಲದಲ್ಲಿ ಬೆಳೆದ ತರಕಾರಿಗಳನ್ನು, ಕಬ್ಬುಗಳನ್ನು ಇಂದು ಚರ್ಚ್ ಗೆ ತಂದು ಒಪ್ಪಿಸುತ್ತಾರೆ. ಚರ್ಚ್ ನಲ್ಲಿ ಬಲಿ ಪೂಜೆ ನಡೆದ ಬಳಿಕ ಎಲ್ಲರಿಗೂ ತೆನೆಯನ್ನು ನೀಡಲಾಗುತ್ತದೆ.ಇದನ್ನ ತೆಗೆದುಕೊಂಡು ಹೋಗುವ ಕ್ರೈಸ್ತ ಬಾಂಧವರು ಹೊಸ ಹಬ್ಬವಾಗಿ ಆಚರಿಸುತ್ತಾರೆ. ಈ ದಿನ ಶುದ್ಧ ಸಸ್ಯ ಹಾರವನ್ನು ಸೇವಿಸುವ ಕ್ರೈಸ್ತ್ರ ಬಾಂಧವರು ಈ ಮೂಲಕ ಮೋಂತಿ ಫೆಸ್ಟ್ ಆಚರಿಸಿಕೊಳ್ಳುತ್ತಾರೆ. ಈ ಬಾರಿ ಕೋವಿಡ್ ಕಾರಣದಿಂದ ಸೀಮಿತ ಜನರಿಗೆ ಆಹ್ವಾನ ನೀಡಲಾಗಿದ್ದು ಸಾಮಾಜಿಕ ಅಂತರ ಕಾಯ್ಧುಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

Related posts

Leave a Reply

Your email address will not be published. Required fields are marked *