Header Ads
Header Ads
Breaking News

ಕ್ರೈಸ್ತ ಸಮುದಾಯವನ್ನು ಮೂಲೆಗುಂಪು ಮಾಡಲು ಸರ್ಕಾರದ ಯತ್ನ : ಐವನ್ ಡಿಸೋಜಾ ಹೇಳಿಕೆ

ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ಕ್ರೈಸ್ತರಿಗೆ ಅವಕಾಶ ನೀಡದೇ , ಕ್ರೈಸ್ತ ಸಮುದಾಯವನ್ನು ಮೂಲೆಗುಂಪು ಮಾಡಲು ಸರ್ಕಾರದ ಯತ್ನ ಮಾಡುತ್ತಿದೆ ಅಂತಾ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದರು. ಈ ಕುರಿತು ಮಂಗಳೂರಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಕೊಂಕಣಿಗರ ಸಾಹಿತ್ಯವನ್ನು ದಮನ ಮಾಡುವ ಯತ್ನ ನಡೀತಿದೆ. ಕ್ರೈಸ್ತ ಸಮುದಾಯಕ್ಕೆ ನೋವುಂಟಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಕೂಡಲೇ ಅನ್ಯಾಯ ಸರಿಪಡಿಸಬೇಕು. ಅನ್ಯಾಯ ಸರಿಪಡಿಸದಿದ್ದರೆ ವಿಧಾನಸಭೆ ಮುಂದೆ ನಾನು ಧರಣಿ ಕೂರುತ್ತೇನೆ ಅಂತಾ ಎಚ್ಚರಿಸಿದ್ರು. ಇನ್ನು ಇದೇ ಸಂದರ್ಭ ಐವನ್ ಡಿಸೋಜ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ‘ಬೆಳಕಿನ ಹಬ್ಬ ದೀಪಾವಳಿ ಭಾವೈಕ್ಯತೆಯ ಸಂಗಮ ‘ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ನಂತರ ಮಾತನಾಡಿದ ಐವನ್ ಡಿಸೋಜಾ, ಬೆಳಕಿನಹಬ್ಬ ಬಾವೈಕ್ಯತೆಯ ಸಂದೇಶ. ಹಬ್ಬವು ಎಲ್ಲರನ್ನೂ ಒಂದು ಮಾಡಲು ಸಹಾಯವಾಗುತ್ತದೆ. ಹಾಗಾಗಿ ಇದೇ ಬರುವ ಅಕ್ಟೋಬರ್ 23 ರಂದು ನಗರದ ಪುರಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೀಪಾವಳಿ ಹಬ್ಬದ ಕಲ್ಪನೆಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಗೂಡುದೀಪ ಸ್ಪರ್ಧೆ, ಅಕ್ಕಿ ವಿತರಣೆ ಕಾರ್ಯಕ್ರಮವು ನಡೆಯಲಿದೆ ಎಂದರು.

Related posts

Leave a Reply

Your email address will not be published. Required fields are marked *