Header Ads
Header Ads
Breaking News

ಖಾತೆ ಬದಲಾವಣೆ ಹೆಸರಿನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಬಲೆಗೆ

ಪುತ್ತೂರು; ಖಾತಾ ಬದಲಾವಣೆಗೆ ಬೇಡಿಕೆ ಇಟ್ಟು ಲಂಚ ಪಡೆಯುತ್ತಿದ್ದ ಹಳೆನೇರಂಕಿ ಗ್ರಾಮದ ಗ್ರಾಮಕರಣಿಕ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ.ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬತ್ತನ ಹಳ್ಳಿ ನಿವಾಸಿ ದುರ್ಗಪ್ಪ(24.ವ) ಬಲೆಗೆ ಬಿದ್ದ ಗ್ರಾಮಕರಣಿಕ. ಹಳೆನೇರಂಕಿ ಗ್ರಾಮದ ಕಾಪಿಕಾಡು ನಿವಾಸಿಯೋರ್ವರು ದೊಡ್ಡಪ್ಪನ ಹೆಸರಿನಿಂದ ತನ್ನಹೆಸರಿಗೆ ಜಾಗದ ಖಾತೆ ಬದಲಾವಣೆಗೆ ಫೆ.20ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸೆ.12ರಂದು ಅರ್ಜಿದಾರರಿಗೆ ನೋಟೀಸು ನೀಡಿದ್ದರು. ಬಳಿಕ ಖಾತೆ ಬದಲಾವಣೆಗೆ ರೂ.20,000 ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ರೂ.5000ವನ್ನು ನೀಡಿದ್ದರು. ಮತ್ತೆ ಹಣನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆದೂರು ನೀಡಿದ್ದರು. ಖಾತೆ ಬದಲಾವಣೆಗೆ ಉಳಿದ ಸತಾಯಿಸುತ್ತಿದ್ದು ಅ.10ರಂದು ತನ್ನದೇ ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಬಂದು ನಗರ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್ ಬಳಿ ಅರ್ಜಿದಾರರಿಂದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

Related posts

Leave a Reply

Your email address will not be published. Required fields are marked *