Header Ads
Header Ads
Header Ads
Breaking News

ಖಾಸಗಿ ವೈದ್ಯರ ಹೋರಾಟ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ವೆನ್ಲಾಕ್, ಲೇಡಿಗೋಷನ್‌ನಲ್ಲಿ ರೋಗಿಗಳ ಸಾಲೋ ಸಾಲು

ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರಿನ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮೊದಲೇ ಮೂಲಭೂತ ಸೌಕರ್ಯಗಳಿಂದ ಬಳಲುತ್ತಿರುವ ಮಂಗಳೂರಿನ ಲೇಡಿಗೋಶನ್ ಮತ್ತು ವೆನ್ಲಾಕ್ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಇದೀಗ ಮತ್ತೆ ಖಾಸಗಿ ವೈದ್ಯರ ಮುಷ್ಕರವು ತಲೆನೋವಾಗಿ ಪರಿಣಮಿಸಿದೆ.

ಅಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬಂದಿರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಟ ಅನುಭವಿಸುವಂತಾಗಿದೆ. ಹೆರಿಗೆ ಸಂಬಂಧಿಸಿ ಬ್ಲೀಡಿಂಗ್ ಆಗುತ್ತಿದ್ದ ಮಹಿಳೆಯೊಬ್ಬರನ್ನು ಬೆಳ್ತಂಗಡಿಯ ಧರ್ಮಸ್ಥಳದಿಂದ ಖಾಸಗಿ ಆಸ್ಪತ್ರೆ ಸೌಲಭ್ಯ ಇಲ್ಲದೆ ಮಂಗಳೂರಿಗೆ ತರಬೇಕಾಯ್ತು ಅಂತಾ ರೋಗಿಯ ಸಂಬಂಧಿಕರು ಅಲವತ್ತುಕೊಂಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವೈದ್ಯರ ವಿಧೇಯಕ ಮಂಡಿಸುವುದನ್ನು ವಿರೋಧಿಸಿ ರಾಜ್ಯದಾದ್ಯಂತ ವೈದ್ಯರು ಮುಷ್ಕರು ಹೂಡಿದ್ದು ಮಂಗಳೂರಿನಿಂದ 400 ಕ್ಕೂ ಹೆಚ್ಚು ಖಾಸಗಿ ವೈದ್ಯರು ಬೆಳಗಾವಿ ಚಲೋಗೆ ತೆರಳಿದ್ದಾರೆ. ಹೀಗಾಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಮಾತ್ರ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುವಂತಾಗಿದೆ.

ವರದಿ: ನಾಗೇಶ್ ಕಾವೂರು, ಮಂಗಳೂರು

Related posts

Leave a Reply