
ವಿವಿಧ ಬೇಡಿಕೆ ಈಡೇರಿಗಳನ್ನು ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಖಾಸಗಿ ಶಾಲೆಯ ಸಿಬ್ಬಂದಿಗಳು ಮತ್ತು ಚಿಲ್ಡ್ರನ್ಸ್ ವೆಲ್ಫೇರ್ ಅಸೋಸಿಯೇಶನ್ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.ಪಿಎಸ್ಎಸಿಡಬ್ಲ್ಯೂಎ ಅಧ್ಯಕ್ಷ ಡಾ. ಅಫ್ ಡಾ. ಅಶ್ಪಾದ್ ಅಹಮ್ಮದ್ ಅವರು ಸಂಘದ ಸದಸ್ಯರೊಂದಿಗೆ ಮೌನ ಪ್ರತಿಭಟನೆ ನಡೆಸಿದರು. ಕೋವಿಡ್ ಪರಿಸ್ಥಿತಿಯಿಂದ ಖಾಸಗಿ ಸಂಸ್ಥೆಯ ಶಿಕ್ಷಕರು ಸಂಕಷ್ಟದಲ್ಲಿದ್ದು ವಿಶೇಷ ಪ್ಯಾಕೇಜ್ನ್ನು ಶಿಕ್ಷಕರಿಗೆ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.ಈ ಸಂದರ್ಭ ಖಾಸಗಿ ಶಾಲೆ ಮತ್ತು ಚಿಲ್ಡ್ರೆನ್ಸ್ ವೆಲ್ಫೇರ್ ಆಸೋಸಿಯೇಶನ್ನ ಕಾರ್ಯದರ್ಶಿ ರಶ್ಮಿ, ಜಂಟಿ ಕಾರ್ಯದರ್ಶಿ ಉಮರ್ ಫಾರೂಕ್, ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.