Header Ads
Breaking News

ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ; ಅಜ್ಜರಕಾಡು ಆಸ್ಪತ್ರೆಗೆ ದಾಖಲು

ಉಡುಪಿ: ಕೆಲವು ದಿನಗಳಿಂದ ಉಡುಪಿ ಸರಕಾರಿ ಬಸ್ಸು ನಿಲ್ದಾಣದಲ್ಲಿ ಅನ್ನ ಆಹಾರ ಇಲ್ಲದೆ, ಅಸಹಾಯಕಳಾಗಿ ಮಲಗಿದಲ್ಲಿಯೆ ದಿನಗಳ ಕಳೆಯುತ್ತಿದ್ದ, ಅಪರಿಚಿತ ಮಹಿಳಾ ರೋಗಿಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ನಡೆದಿದೆ.

ಅನ್ನ ಆಹಾರ ಸೇವಿಸದೆ, ನಡೆದಾಡಲು, ಮಾತನಾಡಲು ತ್ರಾಣ ಇಲ್ಲದ ಪರಿಸ್ಥಿತಿ ಮಹಿಳೆದಾಗಿತ್ತು. ಮಹಿಳೆಯ ತಲೆಗೆ ಗಾಯವಾಗಿ ಹುಳಗಳಾಗಿ ಸಂಚರಿಸುತ್ತಿದ್ದವು. ತಲೆ ಕೂದಲು ಜಡೆ ಕಟ್ಟಿದ್ದವು. ಮಹಿಳೆ ಶೌಚಾದಿಗಳನ್ನು ಸ್ಥಳದಲ್ಲಿ ಮಾಡಿಕೊಂಡಿದ್ದರಿಂದ ಪರಿಸರದಲ್ಲಿ ಗಬ್ಬು ವಾಸನೆ ಹರಡಿತ್ತು. ಪ್ರಯಾಣಿಕರು ಮೂಗುಮುಚ್ಚಿಕೊಂಡು ತಿರುಗಾಡ ಬೇಕಾದ ಪರಿಸ್ಥಿತಿ ಅಲ್ಲಿತ್ತು.

ಮಹಿಳೆ ಕೆಮ್ಮಿಸುತ್ತಿದ್ದರಿಂದ ಆತಂಕದ ವಾತಾವರಣವು ಸೃಷ್ಠಿಯಾಗಿತ್ತು. ಮಹಿಳೆಯ ನರಕಯಾತನೆಯ ಪರಿಸ್ಥಿತಿ ತಿಳಿದು, ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ರಾಜೇಶ್ ಕಾಪು, ತಾರಾನಾಥ್ ಮೇಸ್ತ ಶಿರೂರು, ಅವರು ಘಟನಾ ಸ್ಥಳಕೆ ಧಾವಿಸಿ ಬಂದು, ಮಹಿಳೆಯ ನೆರವಿಗೆ ಬಂದಿದ್ದಾರೆ. ಮಹಿಳೆಯ ತಲೆಕೂದಲನ್ನು ಕ್ಷೌರಿಕರ ಮೂಲಕ ಕತ್ತರಿಸಿ ಶುಚಿಗೊಳಿಸಿದ ಬಳಿಕ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪಂಚರತ್ನ ಸೇವಾ ಟ್ರಸ್ಟ್ ರೋಗಿ ಆಸ್ಪತ್ರೆಗೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ನಗರಸಭೆ ಪೌರಕಾರ್ಮಿಕರು ಮಹಿಳೆ ಇದ್ದ ಸ್ಥಳ ಶುಚಿಗೊಳಿಸಿ ಸಹಕರಿಸಿದರು.

ಮಹಿಳೆ ತನ್ನ ಹೆಸರು ಕೆಂಚಮ್ಮ(45ವ) ತಂದೆ ರಾಮಪ್ಪ, ಚೌಡೇಶ್ವರಿ ನಗರ, ದಾವಣಗೆರೆ ಎಂದು ಹೇಳಿಕೊಂಡಿದ್ದಾರೆ. ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ನಾಗರಿಕ ಸಮಿತಿಯ ಕಾರ್ಯಕರ್ತರು ಸೂಚಿಸಿದ್ದಾರೆ.

Related posts

Leave a Reply

Your email address will not be published. Required fields are marked *