Header Ads
Header Ads
Breaking News

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಆಕಾಡೆಮಿಯಿಂದ ಕಯ್ಯಾರ ಕಿಂಞಣ್ಣ ರೈಗಳ 104ನೇ ಜನ್ಮದಿನ ಆಯೋಜನೆ

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ವತಿಯಿಂದ ಕಯ್ಯಾರಕಿಂಞಣ್ಣ ರೈಯವರ ಕವಿತಾ ಕುಠೀರಕ್ಕೆ ತೆರಳಿ ಅವರ ನೂರ ನಾಲ್ಕನೇ ಜನ್ಮದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕೈಯಾರರು ಸಾಹಿತ್ಯ ಸೇವೆಯನ್ನು ಸ್ಮರಿಸಿದ ಅಕಾಡೆಮಿಯ ಉಪಾಧ್ಯಕ್ಷರಾದ ಪ್ರೋ.ಶ್ರೀನಾಥ್ ಕನ್ನಡಾಂಬೆಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಕಯ್ಯಾರರ ಕೊಡುಗೆ ಅನನ್ಯವಾದುದು.

 ಸ್ವಾತಂತ್ರ್ಯ ಹೋರಾಟಗಾರರಾಗಿ ,ಹಿರಿಯ ಧುರೀಣರಾಗಿ ಬಾಳಿದ ನಾಡೋಜ ಕಯ್ಯಾರರ ಸಾಧನೆ ಮಾತಿಗೆ ನಿಲುಕದ ಇಂತಹ ಮಹನೀಯರ ಸಾಧನೆ ಹಾಗೂ ವ್ಯಕ್ತಿತ್ವವನ್ನು ನೆನಪಿಸಿ ಗೌರವಿಸಬೇಕಾದುದು ನಮ್ಮ ಕರ್ತವ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಅಖೀಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ,ನವಜೀವನ ಪ್ರೌಢಶಾಲೆ ಬದಿಯಡ್ಕ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಆಶ್ರಫ್ ಮುನಿಯೂರು ,ಶ್ರೀಧರ ಮಣಿಯಾಣಿ ಬದಿಯಡ್ಕ , ಕೈಯಾರರ ಸುಪುತ್ರ ಪ್ರದೀಪ್ ರೈ,ಅರತಿ ಪ್ರದೀಪ್ ರೈ,ನವಜೀವನ ಶಾಲಾ ಶಿಕ್ಷಕಿ ಪ್ರಭಾವತಿ ಕೆದಿಲಾಯ ಮತ್ತಿತರರು ಉಪಸ್ಥಿತರಿದ್ದರು.

 

 

Related posts

Leave a Reply