Header Ads
Breaking News

ಗಡಿ ಬಂದ್ ವಿರೋಧಿಸಿ ತಲಪಾಡಿಯಲ್ಲಿ ಎಲ್‍ಡಿವೈಎಫ್‍ನ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರ: ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ದ ಗಡಿನಾಡ ಜನತೆಯ ಪ್ರತಿಭಟನೆ ತಾರಕ್ಕೇರುತ್ತಿದೆ. ನಿನ್ನೆಯ ಪ್ರತಿಭಟನೆ ಹಾಗೂ ಹೈಕೋರ್ಟಿಗೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆರಡು ದಿನವನ್ನು ಸಡಿಲಿಕೆಯನ್ನು ನೀಡಿರುವುದು ಗಡಿನಾಡ ಜನತೆಯಲ್ಲಿ ಅಲ್ಪ ಸಂತೋಷವನ್ನು ನೀಡಿರುವುದಾದರೂ ಮತ್ತೆ ಬುಧವಾರದಿಂದ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿರುವುದಾಗಿ ಮಂಗಳೂರು ಜಿಲ್ಲಾಧಿಕಾರಿ ಹೇಳಿಕೆಯನ್ನು ನೀಡಿರುವುದು ಗಡಿನಾಡ ಜನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ನಾಡ ಜನತೆಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಇಂದು ಎಡರಂಗದ ಯುವ ಸಂಘಟನೆಯಾದ ಎಲ್‍ಡಿ ವೈಎಫ್‍ನ ನೇತೃತ್ವದಲ್ಲಿ ಗಡಿ ಪ್ರದೇಶಕ್ಕೆ ಪ್ರತಿಭಟನಾ ಜಾಥಾ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಯಿತು. ತಲಪಾಡಿ ಗಡಿಯಿಂದ ಆರಂಭಗೊಂಡ ಪ್ರತಿಭಟನಾ ಜಾಥಾವನ್ನು ಟೋಲ್‍ಗೆಟ್ ಪರಿಸರದಲ್ಲಿ ಕರ್ನಾಟಕ ಪೊಲೀಸರು ತಡೆದರು. ಬಳಿಕ ಅಜಿತ್ ಎಂ ಸಿ ಯವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಎಐವೈಎಫ್ ಕಾರ್ಯದರ್ಶಿ ಮಹೇಶ್ ಕಕ್ಕತ್ ಉದ್ಘಾಟಿಸಿದರು. ಮುಖಂಡರಾದ ಕೆ.ಆರ್ ಜಯಾನಂದ, ಮೊಹಮ್ಮದ್ ಅಶ್ರಫ್ ಮೊದಲಾದವರು ಮಾತನಾಡಿದರು.

ಈ ಸಂದರ್ಭ ಮುಖಂಡರಾದ ಪ್ರಶಾಂತ್ ಕನಿಲ, ಮುನೀರ್ ತೂಮಿನಾಡು, ಆಶ್ರಫ್ ಕುಂಜತ್ತೂರು, ಮುಸ್ತಫಾ ಕಡಂಬಾರ್, ದಯಾಕರ ಮಾಡ , ಸಂಕೇತ್ ಕುತ್ತಾರ್ ಮೊದಲಾದವರು ನೇತೃತ್ವ ನೀಡಿದರು.

Related posts

Leave a Reply

Your email address will not be published. Required fields are marked *