Header Ads
Breaking News

ಗಬ್ಬೆದ್ದು ನಾರುತ್ತಿಸದೆ ಮುಕ್ಕ ಮಲ್ಲಮಾರ್ ಬಳಿಯ ಕಡಲ ತೀರ..!ಗ್ಯಾಸ್ ಕಿಟ್ ಸಮಸ್ಯೆಯಿಂದ ಉಕ್ಕೇರಿದ ನೊರೆ

ಮುಕ್ಕ ಮಲ್ಲಮಾರ್ ಬಳಿಯ ಕಡಲತೀರದಲ್ಲಿ ಎಸ್.ಇ.ಝಡ್ ಸ೦ಸ್ಥೆಯ ಹೊರಸೂಸುವ ಕೆಮಿಕಲ್ ಮಿಶ್ರಿತ ನೀರು ಚೇಂಬರ್ ಮೂಲಕ ಕಡಲ ನೀರನ್ನು ಸೇರುತ್ತಿದೆ. ಕಡಲ ತೀರದ ಬಳಿಯಿರುವ ಚೇಂಬರ್‌ನಲ್ಲಿ ನೊರೆ ಮಿಶ್ರಿತ ನೀರು ಹೊರಚಿಮ್ಮುತ್ತಿದ್ದು ಇದರಿಂದ ಮುಕ್ಕ ಮಲ್ಲಮಾರ್ ಸುತ್ತಮುತ್ತಲಿನ ಪರಿಸರದ ಮನೆ ಪರಿಸರವಿಡೀ ದುರ್ನಾತ ಬೀರುತ್ತಿದ್ದು ಮನೆಮಂದಿಗೆ ಊಟ ಮಾಡಲು ಕಷ್ಟಕರವಾಗಿದೆ. ಮಕ್ಕಳು ಊಟ ಮಾಡಲಾಗದೇ ವಾಂತಿ ಮಾಡುತ್ತಿದ್ದು ಸ್ಥಳೀಯರಿಗೆ ವಿಪರೀತ ವಾಸನೆಯಿಂದ ಉಸಿರಾಟದ ಸಮಸ್ಯೆ ಕೂಡಾ ಉ೦ಟಾಗಿದೆ. ಗುರುವಾರ ಮಧ್ಯಾಹ್ನದಿಂದ ಚೇಂಬರ್‌ನಲ್ಲಿ ಧಿಡೀರ್ ನೊರೆ ಬರುತ್ತಿದ್ದು ಇದರಿಂದ ಸುತ್ತಮುತ್ತಲಿನ ಪರಿಸರ ಸಂಪೂರ್ಣವಾಗಿ ವಾಸನೆಯಿಂದ ಕೂಡಿದ್ದು ಮನೆಯವರಿಗೆ ಉಸಿರಾಟದ ಸಮಸ್ಯೆ ಅಲ್ಲದೇ ಮಕ್ಕಳಿಗೆ ವಾಂತಿ ಭೇಧಿಯ ಸಮಸ್ಯೆ ಶುರುವಾಗಿದೆ.ಮುಕ್ಕ ಮಲ್ಲಮಾರು ಪರಿಸರದಲ್ಲಿ ಎಸ್.ಸಿ.ಝಡ್‌ನ ಚೇಂಬರ್‌ನ ಮೂಲಕ ಹೊರಹೊಮ್ಮುತ್ತಿರುವ ದುರ್ವಾಸನೆಯಿಂದ ಸ್ಥಳೀಯ ನಿವಾಸಿಗಳಿ ಉಸಿರಾಡಲು ಕೂಡಾ ಕಷ್ಟವಾಗಿದ್ದು ಆದಷ್ಟು ಬೇಗನೇ ಈ ಚೇಂಬರ್‌ನ್ನು ಮುಚ್ಚಬೇಕು ಇಲ್ಲವೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಚೇಂಬರ್‌ನ ಗ್ಯಾಸ್ ಕಿಟ್‌ನ ಸಮಸ್ಯೆಯಿಂದ ನೊರೆ ಮಿಶ್ರಿತ ನೀರು ಉಕ್ಕೇರುತಿದೆ.ಎಸ್.ಸಿ.ಝಡ್ ಸ೦ಸ್ಥೆಯು ಕಡಲ ತೀರಕ್ಕೆ ಕೆಮಿಕಲ್ ನೀರನ್ನು ಬಿಡುತ್ತಿದ್ದು ಆದರೆ ಚೇಂಬರ್ ನಲ್ಲಿ ಗ್ಯಾಸ್ ಕಿಟ್‌ನ ಸಮಸ್ಯೆಯಿಂದ ಈ ತರಹದ ಸಮಸ್ಯೆ ಉ೦ಟಾಗಿದೆ ಎಂದು ಎಸ್.ಸಿ.ಝಡ್‌ನ ಕಾರ್ಮಿಕರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *