Header Ads
Breaking News

ಮಂಜೇಶ್ವರದಲ್ಲಿರುವ ನೆಕ್ರಾಜೆ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿಯ ನಿರ್ಮಾಣ ಕಾರ್ಯ ಆರಂಭ

ಮಂಜೇಶ್ವರ : ನೆಕ್ರಾಜೆ ಗ್ರಾಮ ದೇವಸ್ಥಾನವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಕಾರ್ಯಗಳಿಗಾಗಿ ಕಾರ್ಕಳದಿಂದ ಶಿಲೆಯನ್ನು ಭಕ್ತರ ಸಮೂಹದಿಂದ ಮೆರವಣಿಗೆ ಮೂಲಕ ತರಲಾಯಿತು.

ನೆಕ್ರಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಸಧ್ಯದಲ್ಲಿಯೇ ಪ್ರಾರಂಭವಾಗಲಿದ್ದು ಶಿಲೆಯನ್ನು ಶ್ರೀ ಕ್ಷೇತ್ರಕ್ಕೆ ತಲುಪಿಸಲಾಗಿದೆ. ನೆಕ್ರಾಜೆಯ ಗ್ರಾಮದ ದೇವಸ್ಥಾನವಾಗಿದ್ದು ಸಂತಾನ ಗೋಪಾಲಕೃಷ್ಣ ಎಂದೇ ಖ್ಯಾತಿ ಪಡೆದಿದೆ. ಅತಿ ಶೀಘ್ರದಲ್ಲಿ ಕೆಲಸವನ್ನು ಪೂರ್ತಿಗೊಳಿಸುವ ಯೋಜನೆ ಹಾಕಲಾಗಿದ್ದು ಭಕ್ತ ಜನರ ಸಹಕಾರದಿಂದ ಅದು ಸಾಧ್ಯವಾಗಲಿದೆ.

ಧಾರ್ಮಿಕ ಮುಂದಾಳು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ. ವಸಂತ ಪೈ ಬದಿಯಡ್ಕ ಅವರು ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ವಿವರಿಸಿದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಿ.ವಸಂತ ಪೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶಂಕರ ನಾರಾಯಣ ಮಯ್ಯ, ಗಣೇಶ ವತ್ಸ ನೆಕ್ರಾಜೆ, ನೆಕ್ರಾಜೆ ಸೀತಾರಾಮ ಶೆಟ್ಟಿ, ಗಂಗಾಧರ ಮಣಿಯಾಣಿ ನೆಲ್ಲಿತ್ತಲ, ರತ್ನಾಕರ ಮಾವಿನಕಟ್ಟೆ, ಗೋಪಾಲ ಭಟ್ ಕೋಳಾರಿ ಮತ್ತು ಶ್ರೀ ಕ್ಷೇತ್ರ ಮಹಿಳಾ ಸಂಘ ನೆಕ್ರಾಜೆ, ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ನೆಕ್ರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಹಾಗೂ ಕ್ಲಬ್‌ಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *