Header Ads
Breaking News

ಗರ್ಭಿಣಿ ಮಹಿಳೆಗೆ ವೈದ್ಯಕೀಯ ಸೇವೆ ನೀಡದೆ ನಿರ್ಲಕ್ಷ್ಯ : ವೈದ್ಯರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಎಚ್ಚರಿಕೆ

ಮೂಡುಬಿದಿರೆ: ಇತ್ತೀಚೆಗೆ ಇರುವೈಲಿನ ಮಹಿಳೆಯೋರ್ವರು ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆಂದು ದಾಖಲಾದಾಗ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯಕೀಯ ಸೇವೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಂಬ ಆರೋಪದ ಮೇರೆಗೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಆಸ್ಪತ್ರೆಗೆ ಭೇಟಿ ವೈದ್ಯರಿಂದ ಮಾಹಿತಿ ಪಡಕೊಂಡರು. 

ಸರಕಾರಿ ಆಸ್ಪತ್ರೆಗೆ ಬರುವವರು ಬಡವರು. ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡುವುದು ನಿಮ್ಮ ಕರ್ತವ್ಯ. ಆದರೆ ಇಲ್ಲಿ ರೋಗಿಗಳ ಬಗ್ಗೆ ನಿರ್ಲಕ್ಯ ವಹಿಸಲಾಗುತ್ತಿದೆ ಎಂಬ ದೂರುಗಳಿವೆ. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ವೈದ್ಯರಿಗೆ ಶಾಸಕರು ಎಚ್ಚರಿಕೆ ನೀಡಿದರು.

ಹೆರಿಗೆಗೆ ದಾಖಲಾದ ಮಹಿಳೆಯನ್ನು ಅದೇ ರಾತ್ರಿ ನಾನು ತಪಾಸಣೆ ನಡೆಸಿದ್ದು ಅವರು ಆರೋಗ್ಯವಾಗಿದ್ದರು. ಸಿಬಂದಿಗಳು ಆಗಾಗ್ಗೆ ಬಂದು ವಿಚಾರಿಸುತ್ತಿದ್ದರು. ಬೆಳಗಿನ ಜಾವ ಅವರಿಗೆ ಹೆರಿಗೆಗೆ ಸಮಸ್ಯೆಯಾಯಿತ್ತೆಂದು ಗೊತ್ತಾದಾಗ ಲೇಡಿಗೋಷನ್‍ಗೆ ಕಳಿಸುವ ವ್ಯವಸ್ಥೆ ಮಾಡಿದ್ದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಇಲ್ಲಿನ ಆಸ್ಪತ್ರೆಯಲ್ಲೆ ಹೆರಿಗೆಯಾಯಿತು. ಹೆರಿಗೆ ವೇಳೆ ಇಬ್ಬರು ಸಿಬಂದಿಗಳು ಜತೆಯಲ್ಲಿದ್ದರು. ನಿರ್ಲಕ್ಷ್ಯದ ಬಗ್ಗೆ ಮಹಿಳೆ ನಮ್ಮಲ್ಲಿ ಏನೂ ಹೇಳಿಲ್ಲ, ಖುಷಿಯಿಂದಲೆ ಮನೆಗೆ ತೆರಳಿದ್ದಾರೆ. ನಿರ್ಲಕ್ಷ್ಯವಾಗಿದೆ ಎಂಬ ಆರೋಪದಿಂದ ಬೇಸರವಾಗಿದೆ’ ಎಂದು ಅಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಸಂಗೀತ ಮಾಧ್ಯಮಕ್ಕೆ ತಿಳಿಸಿದರು.

Related posts

Leave a Reply

Your email address will not be published. Required fields are marked *