Header Ads
Breaking News

ಗಾಂಜಾ ಜಾಲ ಪತ್ತೆಗೆ ಎರಡು ತಂಡ ರಚನೆ : ಎರಡು ತಿಂಗಳಲ್ಲಿ 80ಕ್ಕೂ ಅಧಿಕ ಮಂದಿಯ ಬಂಧನ

ಉಡುಪಿ-ಮಣಿಪಾಲದಲ್ಲಿ ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ತಂಡ ರಚನೆ ಮಾಡಲಾಗಿದೆ ಅಂತ ಎ ಎಸ್ಪಿ ಕುಮಾರಚಂದ್ರ ಹೇಳಿದ್ದಾರೆ. 17 ಪ್ರಕರಣಗಳಲ್ಲಿ 32 ಕೆಜಿ ಗಾಂಜಾ ನಾಶ ಪಡಿಸಿದ ಬಳಿಕ ಜಿಲ್ಲೆಯಲ್ಲಿ ಗಾಂಜಾ ಜಾಲ ಹೆಚ್ಚುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಡ್ರಗ್ಸ್ ಜಾಲ ನಿಯಂತ್ರಣಕ್ಕೆ ಎರಡು ತಂಡ ರಚನೆ ಮಾಡಿದ್ದೇವೆ. ಕಳೆದ ಎರಡು ತಿಂಗಳಲ್ಲಿ ಎಂಬತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೇವೆ. ಮೂವತ್ತೆರಡು ಕೆಜಿಗೂ ಅಧಿಕ ಮಾದಕ ಪದಾರ್ಥಗಳನ್ನು ನಾಶ ಪಡಿಸಲಾಗಿದೆ. ಪ್ರತೀವಾರ ಮಾದಕ ದ್ರವ್ಯ ನಿಯಂತ್ರಣ ಸಂಬಂಧ ರಿವೀವ್ ಮೀಟಿಂಗ್ ಮಾಡಲಾಗುತ್ತಿದ್ದು, ಸಮುದ್ರ ಕಿನಾರೆ ,ಪ್ರವಾಸೀ ತಾಣಗಳಲ್ಲಿ ಯುವಜನರ ಮೇಲೆ ನಿಗಾ ಇರಿಸಿದ್ದೇವೆ ಅಂತ ಮಾಹಿತಿ ನಿಡಿದರು.

Related posts

Leave a Reply

Your email address will not be published. Required fields are marked *