Header Ads
Breaking News

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಎಸೈ ವಿನೋದ್ ಎಸ್. ಅವರ ನೇತೃತ್ವದ ತಂಡ ವಿಟ್ಲ ಸಮೀಪದ ಬದನಾಜೆ ಬಸ್ಸು ನಿಲ್ದಾಣದ ಬಳಿ ಬಂಧಿಸಿದೆ. ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಆಸೀಪ್ ಯಾನೆ ಆಚಿ (30) ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಕಂಬಳಬೆಟ್ಟು ನಿವಾಸಿ ಹ್ಯಾರೀಸ್ ಯಾನೆ ಹೌಲಾ ಹ್ಯಾರೀಸ್ ತಲೆ ಮರೆಸಿಕೊಂಡಿದ್ದಾನೆ. ವಿಟ್ಲ ಎಸೈ ವಿನೋದ್, ಸಿಬ್ಬಂದಿಗಳಾದ ಪ್ರಸನ್ನ ಕುಮಾರ್, ವಿನಾಯಕ, ಪ್ರತಾಪ್ ಕರ್ತವ್ಯದಲ್ಲಿದ್ದ ಸಂದರ್ಭ ಆಚಿ ಯಾನೆ ಆಸೀಫ್ ಮೋಟಾರು ಸೈಕಲ್‍ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನಲೆಯಲ್ಲಿ ಆತನನ್ನು ವಿಚಾರಣೆ ನಡೆಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಮೋಟಾರ್ ಸೈಕಲ್ ಸಹಿತ ಸುಮಾರು 59 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

Leave a Reply

Your email address will not be published. Required fields are marked *