Header Ads
Header Ads
Breaking News

ಎಚ್.ಡಿ.ಡಿ-ಬಿಎಸ್‌ವೈ ನಡುವಿನ ಒಳಒಪ್ಪಂದ ನನಗೇನು ಗೊತ್ತಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ ಹಾಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ಹಿನ್ನಡೆ ಆಗಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಉಡುಪಿಯ ಪುರಭವನದಲ್ಲಿ ಹಮ್ಮಿಕೊಳ್ಳಲಾದ ಗಾಂಧಿ ೧೫೦ನೇ ಸಮಾವೇಶಕ್ಕೆ ಭಾಗವಹಿಸುವ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಪರಿಗಣಿಸೋದಾಗಿ ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ವಾದಕ್ಕೆ ಹಿನ್ನಡೆಯಾಗಿಲ್ಲ. ಪ್ರತ್ಯೇಕ ವಿಚಾರಣೆಗೆ ಕೋರಿದ್ದೆವು, ಕೋರ್ಟ್ ಒಪ್ಪಿದೆ. ಹಾಗಾಗಿ ಹಿನ್ನಡೆ ಹೇಗಾಗುತ್ತೆ? ಸಿದ್ದರಾಮಯ್ಯ ಪ್ರಶ್ನೆಸಿದರು. ಎಚ್‌ಡಿಡಿ ಮತ್ತು ಬಿಎಸ್‌ವೈ ನಡುವೆ ಏನು ಒಳ ಒಪ್ಪಂದ ಆಗಿದ್ಯೋ ಗೊತ್ತಿಲ್ಲ. ಒಳ ಒಪ್ಪಂದದ ಟರ್ಮ್ಸ್ ಆಂಡ್ ಕಂಡೀಷನ್ಸ್ ಏನೋ ಗೊತ್ತಿಲ್ಲ. ಅವರಿಬ್ಬರ ನಡುವೆ ಮಾತುಕತೆ ಆಗಿರೋದಂತೂ ಸ್ಪಷ್ಟವಾಗಿದೆ ಎಂದರು. ಇನ್ನು ಮಾತುಕತೆ ವಿಚಾರವನ್ನು ದೇವೇಗೌಡ, ಕುಮಾರಸ್ಬಾಮಿ ಇಬ್ರೂ ಒಪ್ಕೊಂಡಿದಾರೆ.’ಸಿದ್ದರಾಮಯ್ಯ ಸರ್ಕಾರ ಬೀಳಿಸ್ತಾರೆ ಕುಮಾರಸ್ವಾಮಿ ಟ್ವೀಟ್ ವಿಚಾರದ ಬಗ್ಗೆ ಟ್ವೀಟ್‌ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.? ನಾನೇನೂ ಸರ್ಕಾರ ಬೀಳಿಸ್ತೀನಿ ಅಂದಿಲ್ಲ. ಕುಮಾರಸ್ವಾಮಿ ತಪ್ಪಾಗಿ ಪರಿಭಾವಿಸಿದ್ದಾರೆ. ಬಿಜೆಪಿ ಸರ್ಕಾರ ಉಳಿಯಲು ಎಂಟು ಸ್ಥಾನ ಗೆಲ್ಲಬೇಕು. ಗೆಲ್ಲಕಾಗಿಲ್ಲ ಅಂದ್ರೆ ಯಡಿಯೂರಪ್ಪ ರಾಜಿನಾಮೆ ಕೊಡ್ಬೇಕಾಗುತ್ತೆ. 

 

Related posts

Leave a Reply

Your email address will not be published. Required fields are marked *