Header Ads
Breaking News

ಗಾಡಿ ಗದ್ದೆ ಶಾಲೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಖಾದರ್ : ಅಭಿವೃದ್ಧಿ ಪೂರ್ಣಗೊಳಿಸುವ ಭರವಸೆ

ಪಾವೂರು ಗ್ರಾಮದ ಮೊತ್ತಮೊದಲ ಮತ್ತು 85 ವರ್ಷಗಳ ಹಿಂದಿನ ಹಳೆಯದಾದ ಶಾಲೆಯ ಅಭಿವೃದ್ಧಿ ಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.ಅವರು ಪಾವೂರು ಗ್ರಾಮದ ಗಾಡಿಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶೇಷ ಅನುದಾನದಡಿ ನಿರ್ಮಾಣ ಆಗುತ್ತಿರುವ ಕೊಠಡಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ಗ್ರಾಮದಪೂಂಜ ಕುಟುಂಬಸ್ಥರು ಸ್ಥಳಾವಕಾಶದಿಂದ ಕೊಠಡಿ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಉದ್ದೇಶದಿಂದ ಶಾಲೆ ಅಭಿವೃದ್ಧಿ ನಡೆಸಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ವಿಶೇಷ ಕಾಳಜಿಯಿಂದ ಹೊಸ ಕೊಠಡಿ ಕಟ್ಟಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *