Header Ads
Header Ads
Breaking News

ಗಿನ್ನೆಸ್ ದಾಖಲೆಗೆ ಸಿದ್ಧತೆ ನಡೆಸಿದೆ ತುಳು ಚಿತ್ರರಂಗ

 

ದಿನ ದಿನದಿಂದ ಬೆಳೆಯುತ್ತಿರುವ ತುಳು ಚಿತ್ರರಂಗ ಮತ್ತೊಂದು ವಿಭಿನ್ನ ರೀತಿಯಲ್ಲಿ ತುಳು ಚಿತ್ರವನ್ನು ನಿರ್ಮಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.ಗಿನ್ನಿಸ್ ದಾಖಲೆಗೆ ತುಳುಚಿತ್ರವನ್ನು ಕೊಂಡೊಯ್ಯವ ದೃಷ್ಟಿಯನ್ನಿಟ್ಟುಕೊಂಡಿದೆನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯಿಂದ ೧೭ ಘಂಟೆಗಳಲ್ಲಿ ಚಿತ್ರವೊಂದು ನಿರ್ಮಾಣ ವಾಗಲಿದೆ ಈ ಮೊದಲು ತುಳುವಿನಲ್ಲಿ ಅಂಬರ ಕ್ಯಾಟರರ್ಸ್ ಎಂಬು ಚಿತ್ರ ನಿರ್ಮಿಸಿ ಯಶಸ್ವಿಯಾಗಿತ್ತು10 ತುಳು ಚಿತ್ರರಂಗದ ಯಶಸ್ವಿ ನಿರ್ದೇಶಕರು ಈ ಚಿತ್ರವನ್ನು ಏಕ ಕಾಲದಲ್ಲಿ17 ಗಂಟೆಯಲ್ಲಿ ನಿರ್ದೆಶಿಸಲ್ಲಿದ್ದು,10 ನಾಯಕ ನಟರು ಹಾಗೂ ನಟಿಯರು ಅಭಿನಯಿಸಲ್ಲಿದ್ದಾರೆ.ತುಳು ಭಾಷೆಯಲ್ಲಿ ಪ್ರಥಮ ಮಲ್ಟೀಸ್ಟಾರ್ ಚಿತ್ರವಾಗಲಿದೆ,ಚಿತ್ರಕ್ಕೆ 10 ಕ್ಕೂ ಅಧಿಕ ಕ್ಯಾಮರಾ ಬಳಕೆಯಾಗಲಿದ್ದು10 ಕ್ಕೂ ಮಿಕ್ಕಿದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಹಾಕಲಾಗಿದ್ದು , ವಿಭಿನ್ನ ಕಥೆಯುಳ್ಳ ಈ ಚಿತ್ರದಲ್ಲಿ ತುಳು ರಂಗಭೂಮಿಯ ಮತ್ತು ತುಳು ಚಿತ್ರರಂಗದ ಹೆಚ್ಚಿನ ನಟ ನಟಿಯರು ಅಭಿನಯಿಸುವ ವಿಭಿನ್ನ ಚಿತ್ರವಾಗಲಿದೆ.

 

ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಹರೀಶ್ ಕೊಟ್ಟಾಡಿ ಬರೆದಿದ್ದು ,ತುಳು ಚಿತ್ರ ನಿರ್ದೆಶಕರಾದ ದೇವುದಾಸ್ ಕಾಪಿಕಾಡ್ ,ವಿಜಯ ಕುಮಾರ್ ಕೊಡಿಯಲ್ ಬೈಲ್ ,ಪ್ರಕಾಶ್ ಪಾಂಡೇಶ್ವರ್, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್ ಕಮಲ್ ,ರಿತೇಶ್ ಬಂಗೇರ ,ರಘು ಶೆಟ್ಟಿ ಮುಂತಾದವರು ಅ?ಯಕ್ಷನ್ ಕಟ್ ಹೇಳಲಿದ್ದಾರೆ,ತುಳುವಿನ ಖ್ಯಾತ ಹಾಸ್ಯ ದಿಗ್ಗಜರ ಜೊತೆಗೆ ತಮಿಳು ಚಿತ್ರರಂಗದಲ್ಲಿ ಸುಮಾರು ೪೦ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ ತಮಿಳಿನ ಧನುಷ್ ಅಭಿನಯದ “ಪುಲಿಕಟ್ಟಿ” ಚಿತ್ರದ ರಾಜಸಿಂಹ ಪ್ರಥಮ ಬಾರಿಗೆ ತುಳುವಿನಲ್ಲಿ ಖಳನಾಯಕ ಪಾತ್ರವನ್ನು ನಿರ್ವಹಿಸಲ್ಲಿದ್ದಾರೆಮಾಧ್ಯಮಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ,ರಾಜೇಶ್ ಬ್ರಹ್ಮಾವರ,ಪ್ರಕಾಶ್ ಪಾಂಡೇಶ್ವರ್,ವಿಜಯಕುಮಾರ್ ಕೊಡಿಯಲ್ ಬೈಲ್,ರಘು ಶೆಟ್ಟಿ, ಇಸ್ಮಾಯಿಲ್ ಮೂಡ್ ಶೆಡ್ಯೆ, ಚಿತ್ರ ನಟ ಅರ್ಜುನ್ ಕಾಪಿಕಾಡ್,ಸೌರಭ್ ಭಂಡಾರಿನಟಿ ಪೂಜಾ ಶೆಟ್ಟಿ, ಹಾಗೂ ಮತ್ತಿತರ ಚಿತ್ರರಂಗದ ನಿರ್ದೆಶಕರು ನಟ ನಟಿಯರು
ಉಪಸ್ಥಿತರಿದ್ದರು.

Related posts

Leave a Reply