Header Ads
Header Ads
Breaking News

ತುಳುಚಿತ್ರರಂಗದ ಬಹುನಿರೀಕ್ಷಿತ ಚಲನಚಿತ್ರ ’ಗಿರ್‌ಗಿಟ್’ ತುಳುಚಿತ್ರದ ಮೊದಲ ಹಾಡು ಬಿಡುಗಡೆ

 ತುಳು ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನಾ ಭಾರಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನೆಮಾ ಎಂದರೆ ಗಿರ್‌ಗಿಟ್. ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಗಿರ್‌ಗಿಟ್ ತುಳುಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕ ಸಿನಿರಸಿಕರ ಮನಗೆದ್ದಿದ್ದು, ಇದೀಗ ಚಿತ್ರದ ಮೊದಲ ಹಾಡು ಕೂಡ ಬಿಡುಗಡೆಗೊಂಡಿದೆ.

 ಗಿರ್‌ಗಿಟ್. ತುಳು ಚಲನಚಿತ್ರ ರಂಗದಲ್ಲಿ ತನ್ನ ಟೀಸರ್ ಮೂಲಕವೇ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಚಿತ್ರ. ಈಗಾಗಲೇ ಟೀಸರ್‌ನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದ್ದು, ಮೊದಲ ಹಾಡಿನ ಬಿಡುಗಡೆ ಸಮಾರಂಭ ಮಂಗಳೂರಿನ ಪುರಭವನದಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಬಹುನಿರೀಕ್ಷೆಯ ಗಿರ್‌ಗಿಟ್ ಚಿತ್ರದ ’ಊರೇ ಮುರ್ಕಡ್’ ಎನ್ನುವ ಮೊದಲ ಹಾಡನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಿಂದೆಯೆಲ್ಲಾ ಶಾಲೆಯಲ್ಲಿ ತುಳು ಮಾತನಾಡಿದರೆ ಬೆಂಚ್‌ಮೇಲೆ ನಿಲ್ಲಿಸುತ್ತಿದ್ದರು. ಆದರೆ ಇವತ್ತು ಶಾಲೆಗಳಲ್ಲಿ ೬ನೇ ತರಗತಿಯಿಂದ ಎಂಎವರೆಗೆ ತುಳುವಿನಲ್ಲಿ ಕಲಿಯುವ ಕಾಲ ಬಂದಿದೆ. ಇದು ನಮಗೆಲ್ಲರಿಗೂ ಸಂತೋಷದ ವಿಚಾರ ತುಳು ಭಾಷೆ ಬೆಳೆಯಲಿ ತುಳು ಚಿತ್ರರಂಗ ಬೆಳೆಯಲಿ ಎಂದು ಆಶಿಸಿದರು.

 ಬಳಿಕ ಹಾಸ್ಯನಟ ಭೋಜರಾಜ್ ವಾಮಂಜೂರು ಮಾತನಾಡಿ, ಗಿರ್‌ಗಿಟ್ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾವು ಬಹಳ ಸಂತೋಷದಿಂದ ಶೂಟಿಂಗ್ ಮಾಡಿದ್ದೇವೆ. ನೀವು ಚಿತ್ರಮಂದಿರಕ್ಕೆ ಬಂದು ವೀಕ್ಷಿಸಬೇಕು ಎಂದು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು.

 ಬಳಿಕ ಚಿತ್ರದ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ, ಚಲನಚಿತ್ರದಿಂದ ಕೂಡ ಭಾಷೆ ಬೆಳೆಯಲು ಸಾಧ್ಯ, ಮೊದಲ ದಿನವೇ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ, ನಿಮ್ಮ ಭಾಷಾಪ್ರೇಮದ ಮೇಲೆ ಚಿತ್ರ ನೋಡಿ. ಗಿರ್‌ಗಿಟ್ ಫುಲ್ ಎಂಟರ್‌ಟೈನ್‌ಮೆಂಟ್ ಚಿತ್ರವಾಗಿದ್ದು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಈ ಸಂದರ್ಭ ಚಿತ್ರದ ನಿರ್ಮಾಪಕ ಮಂಜುನಾಥ್ ಅತ್ತಾವರ್, ಸಹ ನಿರ್ದೇಶಕ ರಾಕೇಶ್ ಕದ್ರಿ, ತಾರನಾಥ್ ಶೆಟ್ಟಿ ಬೋಳಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *