Header Ads
Header Ads
Breaking News

ಗುಡ್ಡೆಕೊಪ್ಲ ಬಬ್ಬರ್ಯ-ಬಬ್ಬರ್ಯ ಬಂಟ ದೈವಗಳ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ

ಪ್ರತಿಯೊಂದು ದೇವಸ್ಥಾನ, ದೈವಸ್ಥಾನ ಅಜೀರ್ಣಾವಸ್ಥೆಯಲ್ಲಿದ್ದು ಅದನ್ನು ಪುನರಪಿ ಜೀರ್ಣೋದ್ಧಾರ ಮಾಡುವ ಕೈಂಕರ್ಯದ ಮೂಲಕ ಊರವರು ದೈವ ದೇವರುಗಳ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ರಣ್ಣನವರು ನುಡಿದರು.

ಅವರು ಗುಡ್ಡೆಕೊಪ್ಲ ಬಬ್ಬರ್ಯ- ಬಬ್ಬರ್ಯ ಬಂಟ ದೈವಗಳ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು ಆ ಪ್ರಯುಕ್ತ ಸೋಮವಾರ ಬಬ್ಬರ್ಯ ದೈವಸ್ಥಾನ ಚಾವಡಿಯಲ್ಲಿ ಜರುಗಿದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಕಾರ್ಯಗಳಲ್ಲೂ ಪುರುಷರಿಗೆ ಬೆನ್ನೆಲುಬಾಗಿ ಮಹಿಳೆಯರು ಇದ್ದೇ ಇರುತ್ತಾರೆ. ಸ್ತ್ರೀ ಇಲ್ಲದೇ ಯಾವ ಕಾರ್ಯಗಳೂ ಕೂಡಾ ಪರಿಪೂರ್ಣವಾಗುವುದಿಲ್ಲ. ಊರಿನ ಗ್ರಾಮಸ್ಥರೆಲ್ಲಾ ಒಂದಾಗಿ ದೈವದ ಕೆಲಸದಲ್ಲಿ ಕೈಜೋಡಿಸಿ ಎನಿಸಿದ ಕಾರ್ಯಸಾಂಗವಾಗಿ ನೆರವೇರಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಧ್ಯಕ್ಷ ಪುಂಡಲೀಕ ಹೊಸಬೆಟ್ಟು ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುರತ್ಕಲ್ ಪುರೋಹಿತರಾದ ರಾಮ ಮಯ್ಯ, ದೈವ ನರ್ತಕ ಕಮಲಾಕ್ಷ ಪಂಬದ, ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷ ಕೇಶವ ಕುಂದರ್, ಗುಡ್ಡೆಕೊಪ್ಲ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ್ ಎಸ್.ಅಮೀನ್, ಬಬ್ಬರ್ಯ ದೈವಸ್ಥಾನ, ಕ್ಷೇತ್ರಾಡಳಿತ ಸಮಿತಿ ಕಿಶೋರ್ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *