Header Ads
Header Ads
Breaking News

ಗುದ್ದಲಿಪೂಜೆಗೆ ಸೀಮಿತವಾದ ಕಾಮಗಾರಿ : ಇನ್ನೂ ನಿರ್ಮಾಣವಾಗದ ತೊಡಿಕಾನ-ಮಾಪಳಕಜೆ ಸಂಪರ್ಕ ಸೇತುವೆ

ಹಲವು ತಿಂಗಳ ಹಿಂದೆಯೇ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ಆಗಿದೆ. ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿ ವರ್ಗದವರಲ್ಲಿ ಕೇಳಿದರೆ ಮಳೆಗಾಲದ ನೆಪ. ಹೀಗೆ ಆನೇಕ ವರ್ಷಗಳು ಕಳೆದರೂ ಸೇತುವೆ ನಿರ್ಮಾಣ ಕಾಮಗಾರಿ ಆಗುತ್ತೊ ಇಲ್ಲವೋ ಎನ್ನುವ ಆತಂಕ ತೊಡಿಕಾನ-ಮುಪ್ಪಸೇರು-ಕುದುರೆಪಾಯ-ಮಾಪಳಕಜೆ ಪ್ರದೇಶದ ಜನರದ್ದು.

ತೊಡಿಕಾನ-ಮುಪ್ಪುಸೇರು-ಕುದುರೆಪಾಯ-ಮಾಪಳಕಜೆ ಪ್ರದೇಶಗಳಿಗೆ ಸಂಪರ್ಕ ಸೇತುವೆಯ ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣವಾಗದ ಹಿನ್ನೆಲೇಯಲ್ಲಿ ಈ ಭಾಗದ ನೂರಾರು ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ವಾಹನ ಸಂಪರ್ಕ ಸಾದ್ಯವಾಗದ ಪರಿಣಾಮ ಸ್ಥಳೀಯ ಮಹಿಳೆಗೆ ದಾರಿ ಮಧ್ಯೆ ಹೆರಿಗೆಯಾದ ಘಠನೆ ನಡೆದಿದೆ. ಅದೇ ರೀತಿ ಐದು ವರ್ಷಗಳ ಹಿಂದೆ ಮಳೆಗಾಲದಲ್ಲಿ ಅಸೌಖ್ಯಕೊಳಗಾದ ವ್ಯಕ್ತಿ ಸಕಲಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೇ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು. ಇದು ಒಂದೆರಡು ಉದಾಹರಣೆಗಳು ಅಷ್ಟೇ.

ಈ ಸೇತುವೆ ನಿರ್ಮಾಣಕ್ಕೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಬೇಡಿಕೆ ಇತ್ತು. ಈ ಬೇಡಿಕೆಗೆ ಸಂಸದರ ನಿಧಿಯಿಂದ 20 ಲಕ್ಷ ರೂ ಅನುದಾನ ಬಿಡುಗಡೆಗೊಂಡು ಟೆಂಡರ್ ಆಗಿತ್ತು. ಅಲ್ಲದೇ ಈ ರಸ್ತೆ ಅಭಿವೃದ್ದಿಗಾಗಿ 10 ಲಕ್ಷ ಅನುದಾನ ಇಡಲಾಗಿದೆ ಎಂದು ಶಾಸಕರು ತಿಳಿಸಿದ್ದರು. ಇದೆಲ್ಲದರ ಪರಿಣಾಮ 6 ತಿಂಗಳ ಹಿಂದೆ ಈ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಲಾಗಿದೆ. ಆದರೆ ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಆರಂಭ ಮಾಡದೇ ಇರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಮತ್ಸ್ಯತೀರ್ಥ ಹೊಳೆಯಿಂದ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿಭಾಗದ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಮತ್ಸ್ಯತೀರ್ಥ ಹೊಳೆಯಿಂದ ಗಡಿಭಾಗದ ತನಕ ಸುಮಾರು ಒಂದೂವರೆ ಕಿ.ಮೀ ರಸ್ತೆ ಅಭಿವೃದ್ದಿಯಾಗಬೇಕಿದೆ. .ಸುಮಾರು ಎರಡು ವರ್ಷಗಳ ಹಿಂದೆ ಪೆರಂಬಾರು ಬಳಿ 60 ಮೀಟರ್ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್,ಜಿಲ್ಲಾ ಪಂಚಾಯತ್,ಶಾಸಕ ಅನುದಾನದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದೆ. ಇದರಲ್ಲಿ ಸುಮಾರು 100 ಮೀ ರಸ್ತೆ ಕಾಂಕ್ರೀಟಿಕರಣವಾಗಲು ಬಾಕಿ ಉಳಿದಿದೆ

ತೊಡಿಕಾನದಲ್ಲಿ ಅತೀ ಪರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯವಿದ್ದು ಇದು ಕಾರಣೀಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿಗೆ ದಿನ ನಿತ್ಯ ನೂರಾರು ಭಕ್ತರು,ಉತ್ಸವಾದಿ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲದೆ ಇಲ್ಲಿಯ ದೇವಾಲಯದಲ್ಲಿರುವ ಸಾವಿರಾರು ದೇವರ(ಮಹಷೀರ್)ಮೀನುಗಳು, ಪಕ್ಕದ ದೇವರ ಗುಂಡಿ ಜಲಪಾತ ಅನೇಕ ಪ್ರವಾಸಿ ಪ್ರೇಮಿಗಳನ್ನು ತನ್ನತ್ತ ಗಮನ ಸೆಳೆಯುತ್ತಿದ್ದು ಜನಾಕಾರ್ಷಣೆಯ ಕೇಂದ್ರವಾಗಿ ರೂಪುಗೊಂಡಿದೆ.

ದ.ಕ ಜಿಲ್ಲೆಯ ಗಡಿಭಾಗ ತನಕ ಕೊಡಗು ಜಿಲ್ಲೆಗೆ ಸೇರಿದ ರಸ್ತೆ ಸಂಪೂರ್ಣ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಂಡಿದೆ.ಇಲ್ಲಿಯ ಮಾಪಳಕಜೆ ತೋಡಿಗೆ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು ಅದು ಕೊನೆ ಹಂತದಲ್ಲಿದೆ. ಇದೀಗ ತೊಡಿಕಾನ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಗೊಂಡು ರಸ್ತೆ ಅಭಿವೃದ್ದಿಯಾದರೆ ತೊಡಿಕಾನ- ಕುದರೆಪಾಯ ಮಾಪಳಕೆ ರಸ್ತೆ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಅಂತರ್ ಜಿಲ್ಲಾ ಸಂಪರ್ಕ ರಸ್ತೆ ಅಭಿವೃದ್ದಿಯಾಗುತ್ತದೆ. ತೊಡಿಕಾನ ಪ್ರವಾಸಿ,ಧಾರ್ಮಿಕ ಕೇಂದ್ರವಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ.ಸುಮಾರು ಒಂದುವರೆ ಕಿ ಮೀ ನಷ್ಟು ರಸ್ತೆಯನ್ನು ಅಬಿವೃದ್ದಿ ಮಾಡಲು ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಮುಂದೆಯೂ ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ.ಅಲ್ಲದೆ ಕಿರು ಸೇತುವೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸಂಬಂಧಪಟ್ಟ ಇಲಾಖೆ,ಜನಪ್ರತಿನಿಧಿಗಳು ಸೂಚಿಸಬೇಕಾಗಿದೆ.
ಈ ಬಗ್ಗೆ ತೊಡಿಕಾನ ವಸಂತ ಭಟ್ ಪ್ರತಿಕ್ರಿಯೆ ನೀಡಿ ದಕ್ಷಿಣ ಕನ್ನಡದ ತೊಡಿಕಾನ ಮತ್ತು ಕೊಡಗು ಜಿಲ್ಲೆಯ ಚೆಂಬು ಗ್ರಾಮಗಳ ಮಧ್ಯ ಅವಿನಭಾವ ಸಂಬಂಧವಿದೆ. ಜನರು ಪ್ಯಾಪಾರ, ವ್ಯಾವಹಾರಗಳಿಗೆ ದಕ್ಷಿಣಕನ್ನಡವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ. ಈ ಭಾಗದಲ್ಲಿ ಸುಮಾರು 2000 ಕ್ಕೂ ಅಧಿಕ ಮಂದಿ ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರು ವಾಸ ಮಾಡಿಕೊಂಡಿದ್ದಾರೆ. ಇಲ್ಲಿನ ನಿವಾಸಿಗಳು ತೊಡಿಕಾನಕ್ಕೆ ಬರಬೇಕಾದರೆ ಕೇವಲ 2-3 ಕಿಮೀ ಅಂತರವಿದೆ. ಆದರೆ ಅರಣ್ಯ ವ್ಯಾಪ್ತಿಯ ಒಳಗೆ ರಸ್ತೆ ಮಾಡಲು ಕಾನೂನು ತೊಡಕು ಇರುವುದರಿಂದ ಜನತೆಗೆ ಕಷ್ಠ ಆಗಿದೆ. ಈಗ ಇವರು ಸುಮಾರು 10 ಕಿ.ಮೀ ಕಲ್ಲುಗುಂಡಿಯ ಮೂಲಕ ಸುತ್ತು ಬಳಸಿ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಸಣ್ಣ ಸಣ್ಣ ಕಾರಣಕ್ಕೆ ಈ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ತುರ್ತಾಗಿ ಆಗಬೇಕಾದ ಕಾಮಗಾರಿ ಬೇಗ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಒಟ್ಟಿನಲ್ಲಿ ಇಲ್ಲಯ ಜನತೆಗೆ ಇನ್ನಾದರೂ ಸೇತುವೆ ನಿರ್ಮಾಣವಾಗುತ್ತಾ ಅನ್ನೋದನ್ ಕಾದುನೋಡಬೇಕಾಗಿದೆ.

Related posts

Leave a Reply

Your email address will not be published. Required fields are marked *