Header Ads
Header Ads
Breaking News

ಗೂಳಿ ಫುಟ್ಬಾಲ್ ಆಟ : ಗೂಳಿ ಜೊತೆ ಯುವಕರು ಆಟ ಆಡಿ ಸುಸ್ತೋ ಸುಸ್ತೋ..!

ಸಾಮಾನ್ಯವಾಗಿ ಯುವಕರು ಮೈದಾನಲ್ಲಿ ಫುಟ್ಬಾಲ್ ಆಟ ಆಡ್ತಾರೆ. ಆದ್ರೆ ಇಲ್ಲೊಂದು ಗೂಳಿ ನಾನೂ ಯಾರ್‍ಗೂ ಕಮ್ಮಿ ಇಲ್ಲ ಎಂಬಂತೆ ಚೆಂಡು ಹಿಡಿದು ಆಡೋದಕ್ಕೆ ತಯಾರಾಗಿದೆ. ಅರೆ..ಇದೇನಪ್ಪಾ ಗೂಳಿ ಆಟ ಆಡುತ್ತಾ ಅಂತ ಶಾಕ್ ಆದ್ರಾ..? ಇಲ್ಲಿದೆ ನೋಡಿ ಗೂಳಿಯ ಹಾಸ್ಯಾಸ್ಪದ ಸ್ಟೋರಿ..!

ಅರೆರೆರೆ.. ಈ ದೃಶ್ಯವನ್ನ ಒಮ್ಮೆ ನೋಡಿ..ಚೆಂಡಿಗೆ ಅಡ್ಡಲಾಗಿ ನಿಂತಿರೋ ಗೂಳಿ, ಅದನ್ನ ತರೋದಿಕ್ಕೆ ಹರಸಾಹಸ ಪಡ್ತಾ ಇರೋ ಯುವಕರು, ಹೇಯ್ ಹತ್ರ ಬಂದ್ರೆ ಅಷ್ಟೇ ಮಗ್ನೇ ಅನ್ನೋ ತರ ಗೂಳಿಯ ಬಿಲ್ಡಪ್…ನೋಡ್ತಾ ಇದ್ರೆ ಇದು ಹಾಸ್ಯವೋ ಅಚ್ಚರಿಯೋ ಅನ್ನೋ ಭಾವನೆ.. ಹೌದು.. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾ ಇರೋ ವಿಡಿಯೋ. ಇಲ್ಲಿ ಯುವಕರು ಆಡೋದಿಕ್ಕೆ ಸಿದ್ಧರಾಗಿದ್ದಾರೆ. ಆದ್ರೆ ಚಕ್ರವ್ಯೂಹದೊಳಗೆ ಸಿಲುಕಿಕೊಂಡಂತೆ ಆಡವಾಡುವ ಚೆಂಡು ಗೂಳಿಯ ಪಾದದಡಿ ಸಿಲುಕಿಕೊಂಡಿದೆ. ಇದನ್ನು ಹೊರತೆಗೆಯುವಲ್ಲಿ ಯುವಕರು ಸುಸ್ತೋ ಸುಸ್ತೋ..

ಯುವಕರು ಹೇಗ್ ಆಡ್ತಾರೋ ಹಾಗೇ ಇಲ್ಲಿ ಗೂಳಿನೂ ಆಡ್ತಾ ಇದೆ. ಅತ್ತ ಇತ್ತ ಓಡೋದೇನೋ, ಆಟ ಆಡೋದೇನೋ, ನೊಡ್ತಾ ಇದ್ರೆ ಕಣ್ಣಿಗೆ ಹಬ್ಬ ನೀಡೋ ತರ ಗೋಚರವಾಗ್ತಾ ಇದೆ. ಒಂದು ವೇಳೆ ರನ್ನಿಂಗ್ ರೇಸ್ ಇಟ್ರೆ ಈ ಗೂಳಿ ಮುಂದೆ ಬರೋದು ಅಂತೂ ಗ್ಯಾರಂಟಿ.

ಒಟ್ಟಿನಲ್ಲಿ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾ ಇದ್ದು, ಜನ ಈ ವಿಡಿಯೋ ನೋಡಿ ಬಿದ್ದೂ ಬಿದ್ದೂ ನಕ್ಕು ಸಖತ್ ಎಂಜಾಯ್ ಮಾಡ್ತಾ ಇದ್ದಾರೆ. ವಾಟ್ಸ್ ಅಪ್ ಸ್ಟೇಟಸ್‌ಗಳಲ್ಲಂತೂ ಈ ಗೂಳಿಯದ್ದೇ ಹವಾ ಸೃಷ್ಟಿಯಾಗಿದೆ.

Related posts

Leave a Reply

Your email address will not be published. Required fields are marked *