Header Ads
Breaking News

ಉಡುಪಿಯ ಗ್ರಾಮೀಣ ಆಶ್ರಮಕ್ಕೆ ವಿಶ್ವ ಸಂಸ್ಥೆ ಹ್ಯಾಬಿಟ್ಯಾಟ್ ಚಿನ್ನದ ಪ್ರಶಸ್ತಿ

ರಾಜ್ಯದ ಬುಡಕಟ್ಟು ಸಮುದಾಯದ ಘನತೆ ಗೌರವಗಳ ಪುನಃಸ್ಥಾಪನೆಗಾಗಿ ಶ್ರಮಿಸಿದ ಸಮಗ್ರ ಗ್ರಾಮೀಣ ಆಶ್ರಮಕ್ಕೆ ವಿಶ್ವ ಸಂಸ್ಥೆ ಹ್ಯಾಬಿಟ್ಯಾಟ್ ಚಿನ್ನದ ಪ್ರಶಸ್ತಿ ಲಭಿಸಿದೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅದ್ಯಕ್ಷೆ ಅಮ್ಮಣ್ಣಿ ಮಾಹಿತಿ ನೀಡಿದರು.

ಸಮಗ್ರ ಗ್ರಾಮೀಣ ಆಶ್ರಮವು, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟವನ್ನು ಪ್ರತಿನಿಧಿಸುತ್ತಿದೆ. ರಾಜ್ಯದ ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳ ಕೊರಗ ಹಕ್ಕಿಪಿಕ್ಕಿ ಸಹಿತ ಹಲವು ಸಮುದಾಯಗಳ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ. ಈ ಸಮುದಾಯಗಳ ಭೂಮಿ, ವಸತಿ, ಜೀವನಾಧಾರ, ಶಿಕ್ಷಣ ಮತ್ತು ಆರೋಗ್ಯ ಹಕ್ಕುಗಳಿಗಾಗಿ ಶ್ರಮಿಸ್ತಾ ಇದೆ.ಇದನ್ನು ಗುರುತಿಸಿರುವ ವಿಶ್ವಸಂಸ್ಥೆಯು, ವಿಶ್ವಸಂಸ್ಥೆ ಹ್ಯಾಬಿಟಾಟ್ ಚಿನ್ನದ ಪ್ರಶಸ್ತಿ ನೀಡಿ ಗೌರವಿಸಿದೆ. ಯುಎಇಯ ಅಬುದಾಬಿಯಲ್ಲಿ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಲಾಯಿತು.

Related posts

Leave a Reply

Your email address will not be published. Required fields are marked *