

ಮೂಡುಬಿದಿರೆ ತಾಲೂಕಿನಲ್ಲಿ ನಡೆದಿರುವ ಗ್ರಾ.ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಇಂದು ತಿರ್ಮಾನಗೊಳ್ಳಲಿದ್ದು ಮಹಾವೀರ ಕಾಲೇಜಿನಲ್ಲಿ ಮತ ಎಣಿಕೆ ಆರಂಭಗೊಂಡಿದೆ. ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ ಕಾರ್ಯಕರ್ತರು ಪಕ್ಷದ ಮುಖಂಡರುಗಳು ಯಾರು ವಿನ್ ಆಗಬಹುದೆಂದು ಮಹಾವೀರ ಕಾಲೇಜಿನ ಗೇಟಿನ ಬಳಿಯೇ ಕಾತರದಿಂದ ಕಾಯುತ್ತಾ ನಿಂತಿದ್ದಾರೆ.ಮೂಡುಬಿದಿರೆ ತಾಲೂಕಿನ 12 ಗ್ರಾಮ ಪಂಚಾಯತ್ ಗಳಲ್ಲಿ 193 ಸ್ಥಾನಗಳಿದ್ದು ಅವುಗಳಲ್ಲಿ 7 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತಿಮವಾಗಿ 418 ಮಂದಿ ಅಂತಿಮ ಕಣದಲ್ಲಿದ್ದಾರೆ.