Header Ads
Breaking News

ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್ ನಿಂದ ಲ್ಯಾಂಡ್ ಟ್ರೇಡ್ಸ್‍ಗೆ : ‘ಗ್ರೇಟ್ ಪ್ಲೇಸ್ ಟು ವರ್ಕ್’ ಪ್ರಮಾಣೀಕರಣ

ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ & ಡೆವಲಪರ್ಸ್ ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯಿಂದ ‘ಗ್ರೇಟ್ ಪ್ಲೇಸ್ ಟು ವರ್ಕ್’ ಪ್ರಮಾಣೀಕರಣವನ್ನು ಪಡೆದಿದೆ. ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್ ಉದ್ಯೋಗ ಸ್ಥಳಗಳಲ್ಲಿ ಉತ್ತಮ ವಿಶ್ವಾಸ, ಕಾರ್ಯಕ್ಷಮತೆಯ ಪರಿಪೂರ್ಣ ಸಂಸ್ಕೃತಿಯನ್ನು ನಿರ್ಮಿಸುವ, ಉಳಿಸಿಕೊಳ್ಳುವ ಮತ್ತು ಗುರುತಿಸುವ ಜಾಗತಿಕ ಸಂಸ್ಥೆಯಾಗಿದೆ. ಲ್ಯಾಂಡ್ ಟ್ರೇಡ್ಸ್ ಈ ಮಾನ್ಯತೆಯನ್ನು ಪಡೆದ ಭಾರತದ ನಾಲ್ಕು ಮೆಗಾ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಕರಾವಳಿ ಕರ್ನಾಟಕದ ಮೊದಲನೆಯದಾಗಿದೆ. ಪ್ರತಿವರ್ಷ, 60 ಕ್ಕೂ ಹೆಚ್ಚು ದೇಶಗಳ 10,000 ಕ್ಕೂ ಅಧಿಕ ಸಂಸ್ಥೆಗಳು ತಮ್ಮ ಉದ್ಯೋಗ ಸಂಸ್ಕøತಿಯನ್ನು ಬಲಪಡಿಸಲು ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳುತ್ತವೆ.
ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯ ಮೌಲ್ಯಮಾಪನ ವಿಧಾನವನ್ನು ಕಠಿಣ ಮತ್ತು ವಸ್ತುನಿಷ್ಠವೆಂದು ಗುರುತಿಸಲಾಗಿದೆ. ಕಾರ್ಪೋರೇಟರ್ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ವಾತಾವರಣವನ್ನು ವ್ಯಾಖ್ಯಾನಿಸಲು ಇದನ್ನು ‘ಗೋಲ್ಡ್ ಸ್ಟ್ಯಾಂಡರ್ಡ್’ ಎಂದು ಪರಿಗಣಿಸುತ್ತಿವೆ. ಪ್ರಮಾಣಪತ್ರವನ್ನು ನೀಡುವ ಮೊದಲು, ಸಂಸ್ಥೆಯು ಕಂಪನಿಯ ಮಾನವ ಸಂಪನ್ಮೂಲ ಅಭ್ಯಾಸಗಳು ಮತ್ತು ನೀತಿಗಳನ್ನು ಪರಿಶೋಧಿಸುತ್ತದೆ. ಭಾಗವಹಿಸುವ ಎಲ್ಲಾ ಸಂಸ್ಥೆಗಳು ಕಠಿಣ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಮತ್ತು ನೌಕರರ ಗೌಪ್ಯ ಸಮೀಕ್ಷೆಯನ್ನು ಸಂಸ್ಥೆ ನಡೆಸುತ್ತದೆ. ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಅರ್ಹ ಉದ್ಯೋಗಿಗಳಲ್ಲಿ ಶೇಕಡಾ 98 ಕ್ಕಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದರು ಮತ್ತು ಐದು ಪ್ರಮುಖ ನಿಯತಾಂಕಗಳಲ್ಲಿ ಸಂಸ್ಥೆಯನ್ನು ಗುರುತಿಸಿದರು. ಈ ಗುರುತಿಸುವಿಕೆಯು ತನ್ನ ಉದ್ಯೋಗಿಗಳಲ್ಲಿ ಸೌಹಾರ್ದತೆ, ನ್ಯಾಯಸಮ್ಮತತೆ, ಗೌರವ, ಹೆಮ್ಮೆ ಮತ್ತು ವಿಶ್ವಾಸಾರ್ಹತೆಯ ಸಂಸ್ಕೃತಿಯನ್ನು ಬೆಳೆಸುವ ಸಂಸ್ಥೆಯ ಬದ್ಧತೆಯನ್ನು ಬಿಂಬಿಸುತ್ತದೆ.
ಈ ವಿಶಿಷ್ಟ ಸಾಧನೆಯ ಬಗ್ಗೆ ಲ್ಯಾಂಡ್ ಟ್ರೇಡ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ. ಶ್ರೀನಾಥ್ ಹೆಬ್ಬಾರ್ ಹೀಗೆಂದರು: “ಇದು ನಿಜಕ್ಕೂ ಒಂದು ವಿನಮ್ರ ಅನುಭವ. ಸಂಸ್ಥೆಯಲ್ಲಿ ನಂಬಿಕೆಯನ್ನು ಮರುಕಳಿಸಿದ್ದಕ್ಕಾಗಿ ಪ್ರತಿಯೊಬ್ಬ ಉದ್ಯೋಗಿಯ ಬಗ್ಗೆ ನನಗೆ ಹೆಮ್ಮೆ ಇದೆ. ಲ್ಯಾಂಡ್ ಟ್ರೇಡ್ಸ್ ಕಳೆದ ಎರಡೂವರೆ ದಶಕಗಳಲ್ಲಿ ನಿರ್ಮಿಸಲಾದ ಅಸಾಧಾರಣ ಗ್ರಾಹಕ ನಂಬಿಕೆಯ ಶ್ರೀಮಂತ ಪರಂಪರೆಯ ಮೇಲೆ ನಿಂತಿದೆ. ಇದು ಯಾವಾಗಲೂ ಸಂಪೂರ್ಣ ಒಳಗೊಳ್ಳುವಿಕೆ ಮತ್ತು ದೃಢವಾದ ನಂಬಿಕೆಯೊಂದಿಗೆ ಸೇವೆ ಸಲ್ಲಿಸಿದ ನಮ್ಮ ನೌಕರರ ಅಸಾಧಾರಣ ಪ್ರಯತ್ನದ ಫಲಿತಾಂಶವಾಗಿದೆ. ಪ್ರತಿದಿನ ನಮ್ಮ ಜನರಿಗೆ ಅದೇ ರೀತಿಯಲ್ಲಿ ನಮ್ಮ ಸೇವೆಯನ್ನು ಮುಂದುವರಿಸಲು ಇದು ನಮಗೆ ಅದ್ಭುತ ಸ್ಫೂರ್ತಿ ನೀಡುತ್ತದೆ.”
ಗ್ರೇಟ್ ಪ್ಲೇಸ್ ಟು ವರ್ಕ್ ಪ್ರಮಾಣೀಕರಣವು ವೃತ್ತಿಪರ ಥರ್ಡ್ ಪಾರ್ಟಿ ಸಂಸ್ಥೆಗಳ ಮೂಲಕ ತಮ್ಮ ಉನ್ನತ ಕಾರ್ಯಕ್ಷಮತೆಯ ಸ್ವತಂತ್ರ ವಿಮರ್ಶಾತ್ಮಕ ಮೌಲ್ಯಮಾಪನ ಪಡೆಯುವಲ್ಲಿ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಪ್ರಯತ್ನಗಳ ಒಂದು ಭಾಗವಾಗಿದೆ. ಐಎಸ್‍ಒ 9000:2015 ಪ್ರಮಾಣೀಕೃತ ಸಂಸ್ಥೆಯಾದ ಲ್ಯಾಂಡ್ ಟ್ರೇಡ್ಸ್ ಕ್ರಿಸಿಲ್ ನಿಂದ `ಡಿಎ 2′ ರಿಯಲ್ ಎಸ್ಟೇಟ್ ಡೆವಲಪ್ಪರ್ ಗುರುತಿಸುವಿಕೆಯುನ್ನು ಹೊಂದಿದೆ. ಲ್ಯಾಂಡ್ ಟ್ರೇಡ್ಸ್ ನ ಅನೇಕ ಪ್ರಮುಖ ವಸತಿ ಅಪಾರ್ಟ್‍ಮೆಂಟ್ ಯೋಜನೆಗಳು ಕ್ರಿಸಿಲ್ ನೀಡುವ `7 ಸ್ಟಾರ್ಸ್’ ಮತ್ತು `6 ಸ್ಟಾರ್ಸ್’ ಉನ್ನತ ಶ್ರೇಯಾಂಕವನ್ನು ಹೊಂದಿವೆ. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಐ), ಮಂಗಳೂರು ಕೇಂದ್ರ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಸ್ಥಾಪಿಸಿದ `ಅಲ್ಟ್ರಾಟೆಕ್ ಪ್ರಶಸ್ತಿ’ ಯನ್ನು ಸಂಸ್ಥೆಯು ಪಡೆದಿದೆ.
ಲ್ಯಾಂಡ್ ಟ್ರೇಡ್ಸ್ ತನ್ನ ಕಾರ್ಯಕ್ಷಮತೆ ನೌಕರರ ಕಲ್ಯಾಣ ಮತ್ತು ಗ್ರಾಹಕರ ತೃಪ್ತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಪರಿಗಣಿಸುತ್ತದೆ. “ಸಂಸ್ಥೆಯ ಯಶಸ್ಸಿಗೆ ಬೇಕಾದುದು ಸಂತೃಪ್ತ ಗ್ರಾಹಕರ ಸ್ಥಿರ ಪ್ರವಾಹ. ಗ್ರಾಹಕರ ನಿಷ್ಠೆ ಮತ್ತು ಪುನರಾವರ್ತಿತ ಭೇಟಿಗಳು ಗ್ರಾಹಕರ ತೃಪ್ತಿಯ ಸಂಕೇತವಾಗಿವೆ. ಸಂಸ್ಥೆ ಹುರುಪಿನ ಉದ್ಯೋಗ ಸಂಸ್ಕøತಿಯನ್ನು ನಿರ್ಮಿಸಿದಲ್ಲಿ, ನೌಕರರು ಗ್ರಾಹಕರನ್ನು ಸಂತೃಪ್ತ ಪಡಿಸುತ್ತಾರೆ. ಹೀಗಾಗಿ ಉದ್ಯೋಗ ವಾತಾವರಣವು ಗ್ರಾಹಕರ ಸಂತೃಪ್ತಿಯಲ್ಲಿ ಪ್ರತಿಧ್ವನಿಸುತ್ತದೆ,” ಎಂದು ಶ್ರೀ ಶ್ರೀನಾಥ್ ಹೆಬ್ಬಾರ್ ವಿವರಿಸಿದರು.
ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ & ಡೆವಲಪ್ಪರ್ಸ್ ಸಂಸ್ಥೆಯನ್ನು ಅಕ್ಟೋಬರ್ 28, 1992 ರಂದು ಯುವ ಉದ್ಯಮಿ ಶ್ರೀ ಕೆ. ಶ್ರೀನಾಥ್ ಹೆಬ್ಬಾರ್ ಅವರು ಸ್ಥಾಪಿಸಿದರು. ಮಂಗಳೂರಿನಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಿಸುವಲ್ಲಿ ಅನುಭವ ಪಡೆದ ನಂತರ, ಲ್ಯಾಂಡ್ ಟ್ರೇಡ್ಸ್ 2008 ರಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣಕ್ಕೆ ಮುಂದಾಯಿತು. ಈಗ ಇದು ನಗರದ ಪ್ರಮುಖ ಬಿಲ್ಡರ್‍ಗಳಲ್ಲಿ ಒಂದಾಗಿದೆ. ಇದು ಪ್ರತಿಷ್ಠಿತ ವಸತಿ ಯೋಜನೆಗಳಾದ ಸಾಯಿ ಗ್ರ್ಯಾಂಡಿಯರ್, ಮೌರಿಷ್ಕಾ ಪ್ಯಾಲೇಸ್, ಅಟ್ಲಾಂಟಿಸ್ ಮತ್ತು ಸಾಲಿಟೇರ್ ಸೇರಿದಂತೆ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಿದೆ. ಸಂಸ್ಥೆಯು 3,000+ ಮನೆಗಳನ್ನು ಸೇರಿದಂತೆ ಈವರೆಗೆ 38 ವಸತಿ ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು 41.32 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ನಿರ್ಮಿಸಿದೆ.

 

Contact:

LAND TRADES BUILDERS & DEVELOPERS

‘Milestone25’, 5th Floor

Collectors Gate Junction, Balmatta

Mangalore – 575002

 

Landline: +91 0824 2425424, 2423866

Enquiries: 8882777444, 9845084866

Email: [email protected], [email protected]

Website: www.landtrades.in

Related posts

Leave a Reply

Your email address will not be published. Required fields are marked *