Header Ads
Header Ads
Breaking News

ಚಂಢೀಗಢದಲ್ಲಿ ನಡೆದ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ : ಮಂಗಳೂರಿನ ಹುಡುಗ ಧನ್‌ರಾಜ್ ಎಂ.ರಿಗೆ ರಾಷ್ಟ್ರ ಪ್ರಶಸ್ತಿ

ಪಣಂಬೂರು : ಮಂಗಳೂರಿನ ಧನರಾಜ್ ಎಂ. ಅವರು ಚಂಢೀಗಢದಲ್ಲಿ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪ್ರಥಮ ದಕ್ಷಿಣ ಭಾರತದ ಯುವಕ ಎನಿಸಿಕೊಂಡಿದ್ದಾರೆ. ಸರಕಾರ ಅಂಗೀಕೃತ ಫೆಡರೇಷನ್ ಆಫ್ ಬಾಡಿ ಬಿಲ್ಡಿಂಗ್ ಎಸೋಸಿಯೇಷನ್ ಸ್ಫರ್ಧೆಯನ್ನು ಆಯೋಜಿಸಿತ್ತು.

ಧನರಾಜ್ ಎಂ.ರವರು ಕರ್ನಾಟಕವನ್ನು ಪ್ರತಿನಿಧಿಸಿದ್ದ ರಾಷ್ಟ್ರದ ವಿವಿಧ ರಾಜ್ಯಗಳಿಂದ ಬಂದ 250ಸ್ಪರ್ಧಿಗಳನ್ನು ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಪ್ರಶಸ್ತಿ ಗಳಿಸಿಕೊಡುವಲ್ಲಿ ಸಫಲರಾದರು. ಒಟ್ಟು 10ರೌಂಡ್ಸ್‌ಗಳಿರುವ ಈ ಸ್ಪರ್ಧೆಯಲ್ಲಿ ದೆಹಲಿಯ ಸ್ಪರ್ಧಿಗಳನ್ನು ಹಿಂದಿಕ್ಕಿ ವಿಜೇತರಾದರು.

ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಜಿಲ್ಲಾ ಬಾಡಿ ಬಿಲ್ಡಿಂಗ್ ಫೆಡರೇಷನ್ ವತಿಯಿಂದ ಧನರಾಜ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‌ಭಾಗ್, ಸಂತೋಷ್ ಬಿಜೈ, ಲೋಹಿತ್, ರಿನಿತ್, ರೋಶನ್ ಬಳ್ಳಾಲ್‌ಭಾಗ್, ಕಿರಣ್, ಬಾಡಿ ಬಿಲ್ಡಿಂಗ್ ಎಸೋಸಿಯೇನ್‌ನ ದಿಲೀಪ್ ಕುಮಾರ್, ಗಂಗಧರ್ ಎಂ., ರಾಜೇಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply