Header Ads
Header Ads
Breaking News

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ

ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಮಳೆಯಿಂದಾಗಿ 9 ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿದ್ದು ಸೋಮವಾರ ಸಂಜೆಯಿಂದ ನೂರಾರು ವಾಹನಗಳು ಹಿಂದಕ್ಕೂ ಮುಂದಕ್ಕೂ ಚಲಿಸಲಾಗದೆ500ಕ್ಕೂ ಹೆಚ್ಚು ಸವಾರರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.ಬೆಳ್ತಂಗಡಿ ಕಡೆಯಿಂದ ಬೃಹತ್ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನ ಸವಾರರಿಗೆ ದಾರಿಯೇ ಇಲ್ಲದಂತಾಗಿದೆ.ಕಾರುಗಳಲ್ಲಿದ್ದ ಪುಟ್ಟ ಮಕ್ಕಳು ಸೇರಿದಂತೆ ಹಿರಿಯ ವಯಸ್ಕರು ಆಹಾರ, ಔಷಧಿಗಳಿಲ್ಲದೆ ಪರದಾಡಬೇಕಾಯಿತು. ಸಮಾಜ ಸೇವಕ ಹಕೀಂ ಅವರು ತುರ್ತು ಆಹಾರ ಮತ್ತು ಔಷಧವನ್ನು ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.  1 ಮೂಡಿಗೆರೆ ಮತ್ತು ಬೆಳ್ತಂಗಡಿ ಭಾಗದ ಪೊಲೀಸರು ರಸ್ತೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸ್ಥಳಕ್ಕೆ ತೆರಳಲು ಹರಸಾಹಸ ಪಡಬೇಕಾಗಿದೆ. ಇನ್ನೂ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ವಾಹನದಲ್ಲಿರುವ ಸವಾರರು ಆತಂಕದಲ್ಲಿದ್ದಾರೆ. ಬೃಹತ್ ಗುಡ್ಡ ಮರ ಸಮೇತ ಕಿತ್ತು ಪಿಕಪ್ ವಾಹನವೊಂದರ ಮೇಲೆ ಬಿದ್ದಿದ್ದು ಅದೃಷ್ಟವಷಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಸಿಲುಕಿರುವವರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ. ಸದ್ಯ ಸ್ಥಳದಲ್ಲಿ2 ಜೆಸಿಬಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

Related posts

Leave a Reply