Header Ads
Breaking News

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು : ಉಡುಪಿಯ ಬಂಡೀ ಮಠದ ಬಳಿ ನಡೆದ ಘಟನೆ

ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದ ಘಟನೆ ಉಡುಪಿಯ ಬಂಡೀ ಮಠದ ಬಳಿ ನಡೆದಿದೆ. ಕುಂದಾಪುರ ತಾಲೂಕಿನ ಬಾರಕೂರು ಕೂಡ್ಲಿ ರಾಮಕೃಷ್ಣ ಅವರ ಕುಟುಂಬ ಯಡ್ತಾಡಿಯಿಂದ ಬಂಡೀಮಠಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಭಾಗಕ್ಕೆ ಹೋಗಿದೆ. ಪಕ್ಕದಲ್ಲಿ ಇದ್ದ ಕೆರೆಗೆ ಹೊರಳಿದೆ. ಕಾರಿನ ಮುಂಭಾಗ ಮುಳುಗುತ್ತಿದ್ದಂತೆ ಕಾರಿನಲ್ಲಿದ್ದ ಎಲ್ಲರೂ ಬಾಗಿಲು ತೆಗೆದು ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಪ್ರಯತ್ನದಿಂದ ಕಾರನ್ನು ಮೇಲಕ್ಕೆತ್ತಲಾಯಿತು.

Related posts

Leave a Reply

Your email address will not be published. Required fields are marked *