Breaking News

ಚೀನೀ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸೋಣ ವಿಶೇಷ ಉಪನ್ಯಾಸದಲ್ಲಿ ಪ್ರೊ.ಬಿ.ಎಂ ಕುಮಾರಸ್ವಾಮಿ ಕರೆ

 

ಚೀನಾವು ಈಶಾನ್ಯ ಭಾರತವನ್ನು ಕಳೆದ ೨೭ ವರ್ಷಗಳಿಂದ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ಆರ್ಥಿಕವಾಗಿ ಆಕ್ರಮಣ ಮಾಡುತ್ತಾ ಬಂದಿದೆ. ನಮ್ಮ ದೇಶದ ಜೊತೆ ಆರ್ಥಿಕವಾಗಿ ವ್ಯವಹಾರ ಮಾಡುತ್ತಾ ಅತ್ಯಂತ ಹೆಚ್ಚಿನ ರೀತಿಯಲ್ಲಿ ಲಾಭಗಳಿಸಿ, ನಮ್ಮ ಮೇಲೆಯೇ ಸವಾರಿ ಮಾಡುತ್ತಿರುವ ಚೀನಾದ ಹೆಚ್ಚಿನ ಇಲೆಕ್ಟ್ರೋನಿಕ್ಸ್ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸೋಣ ಎಂದು ಸ್ವದೇಶಿ ಜಾಗರಣಾ ಮಂಚ್‌ನ ಅಖಿಲ ಭಾರತ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಕರೆ ನೀಡಿದರು.

ಅವರು ಪ್ರೇರಣಾ ಸೇವಾ ಟ್ರಸ್ಟ್, ಮೂಡುಬಿದಿರೆ ಮತ್ತು ವಂದೇ ಮಾತರಂ ವಿವಿದ್ದೋದ್ಧೇಶ ಸೌಹಾರ್ದ ಸಹಕಾರಿ ಇವುಗಳ ವತಿಯಿಂದ ಶುಕ್ರವಾರ ಸಮಾಜ ಮಂದಿರ ಸಭಾಭವನದಲ್ಲಿ “ಭಾರತದ ಮೇಲೆ ಚೀನೀ ಆರ್ಥಿಕ ಆಕ್ರಮಣ” ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಭಾರತದ ಶೇ೫೦ ಭಾಗ ಚೀನಾದ ವಸ್ತುಗಳಿಂದ ಕೂಡಿದೆಯಲ್ಲದೆ ನಮ್ಮ ಮನ ಮನೆಗಳಲ್ಲಿಯೂ ಆವರಿಸಿಕೊಂಡಿದೆ. ಇದರಿಂದಾಗಿ ನಮ್ಮ ದೇಶದ ಉದ್ಯಮಗಳು, ಕೈಗಾರಿಕೆಗಳು, ಕೃಷಿ ಅವನತ್ತಿಯತ್ತ ಸಾಗುವ ಮೂಲಕ ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತಿವೆ ಆದ್ದರಿಂದ ನಮ್ಮ ದೇಶವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು ನಮ್ಮ ದೇಶದಲ್ಲಿಯೇ ಬಂಡವಾಳಗಳನ್ನು ಹೂಡಿ ಉತ್ಪಾದನೆಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಶತ್ರು ದೇಶದ ವಸ್ತುಗಳನ್ನು ತಿರಸ್ಕರಿಸಲು ಪಣ ತೊಡೋಣ ಎಂದು ಸಲಹೆ ನೀಡಿದರು.

ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಚಾವಡಿಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೇಶವ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು. ವಂದೇ ಮಾತರಂ ವಿವಿದ್ದೋದ್ಧೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರೊ.ಎಂ ವಾಸುದೇವ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Related posts

Leave a Reply