Header Ads
Breaking News

ಜನಪ್ರತಿನಿಧಿಗಳ ಪ್ರಕರಣ ಹಿಂತೆಗೆತ ನಿರ್ಧಾರ ಕಾನೂನುಬಾಹಿರ : ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೊಬೋ ಹೇಳಿಕೆ

ಮಂಗಳೂರು, ಸೆ.10: ಶಾಸಕರು,ಸಂಸದರು ಸೇರಿದಂತೆ ಬಿಜೆಪಿಯ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಬಿಜೆಪಿ ಸರಕಾರ ಕೈಗೊಂಡಿರುವ ನಿರ್ಧಾರ ನಿಯಮಬಾಹಿರವಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಕೆಲವು ಶಾಸಕರು, ಸಂಸದರ ಮೇಲೆ ದಾಖಲಾಗಿರುವ 62 ಕ್ರಿಮಿನಲ್ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಇತ್ತೀಚೆಗೆ ಜರಗಿದ ಸಚಿವ ಸಂಪುಟಸಭೆಯಲ್ಲಿ ನಿರ್ಧರಿಸಿರುವುದು ಕಾನೂನು ಬಾಹಿರ ಎಂದರು. ಇದರಲ್ಲಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ, ಸಂಸದ ಪ್ರತಾಪಸಿಂಹ, ಸಚಿವರಾದ ಸಿ.ಟಿ.ರವಿ,ಬಿ.ಸಿ.ಪಾಟೀಲ್,ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೂ ಸೇರಿವೆ. ಇದಕ್ಕೆ ಡೈರೆಕ್ಟರೇಟ್ ಆಪ್ ಪ್ರಾಸಿಕ್ಯೂಸನ್ ಹಾಗೂ ಪೊಲೀಸ್ ಇಲಾಖೆಯ ಸ್ಪಷ್ಟ ವಿರೋಧವಿದ್ದರೂ ಇದನ್ನು ಪರಿಗಣಿಸದೆ ಸಚಿವ ಸಂಪುಟ ಉಪಸಮಿತಿಯ ಶಿರಸ್ಸು ಆಧರಿಸಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಬಿ.ಇಬ್ರಾಹಿಂ ಅವರು ಮಾತನಾಡಿ ಸರಕಾರ ನಿಯಮಗಳನ್ನು ಮೀರಿ ಈ ರೀತಿಯಾಗಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಹೊರಟಿರುವುದು ಖಂಡನೀಯ ಎಂದರು.ಈ ಸಂದರ್ಭ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ ,ಸದಾಶಿವ ಉಳ್ಳಾಲ್, ಸಲೀಂ, ವಿಶ್ವಾಸ್‍ದಾಸ್, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್, ನೀರಜ್‍ಪಾಲ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *