Header Ads
Header Ads
Breaking News

ಜನರಲ್ ಆಸ್ಪತ್ರೆಯ ಲಿಫ್ಟ್ ಕಾರ್ಯಾಚರಿಸದೇ ಇರುವ ಹಿನ್ನೆಲೆ ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಯಲ್ಲಿ ತೊಂದರೆ ಆಸ್ಪತ್ರೆಯ ಅಧಿಕೃತರ ವಿರುದ್ಧ ವ್ಯಾಪಕ ಆಕ್ರೋಶ

ಕಾಸರಗೋಡು: ಸ್ತಂಭನಗೊಂಡು ಹತ್ತು ದಿವಸ ಕಳೆದರೂ ಜನರಲ್ ಆಸ್ಪತ್ರೆಯ ಲಿಫ್ಟ್ ನ್ನು ಇನ್ನೂ ಸರಿಪಡಿಸದ ಆಸ್ಪತ್ರೆ ಅಧಿಕೃತರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿಕಿತ್ಸೆಯ ಮಧ್ಯೆ ಮೃತಪಟ್ಟ ಮಹಿಳೆಯ ಮೃತದೇಹವನ್ನು ಮೆಟ್ಟಲಿನಿಂದ ತರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅಸೌಖ್ಯ ಬಾಧಿಸಿ ಚಿಕಿತ್ಸೆಯ ಮಧ್ಯೆ ಸಾವನ್ನಪ್ಪಿದ ಅರಮಂಗಾನ ನಿವಾಸಿ ಸರಸ್ವತಿ ಕೊನೆಯುಸಿರೆಳೆದಿದ್ದರು.ಲಿಫ್ಟ್ ಕಾರ್ಯಾಚರಿಸದೇ ಇರುವ ಹಿನ್ನೆಲೆಯಲ್ಲಿ ಭಾರೀ ಕಷ್ಟಪಟ್ಟು ಶವವನ್ನು ಸಂಬಂಧಿಕರು ಮೆಟ್ಟಲಿನ ಮೂಲಕ ಕೆಳಗೆ ಇಳಿಸಿದ್ದಾರೆ. ಈ ಮೊದಲು ಕೂಡಾ ಇದೇ ಅವಸ್ಥೆ ಇಲ್ಲಿ ಬಂದೊದಗಿತ್ತು. ಹೈದರಾಬಾದ್ ನಿಂದ ಟೆಕ್ನಿಶ್ಯೀಯನ್ ಆಗಮಿಸಿದ ಬಳಿಕವಷ್ಟೇ ಲಿಫ್ಟ್ ಸರಿಯಾಗಬಹುದೆಂಬುದು ಆಸ್ಪತ್ರೆ ಅಧಿಕೃತರ ಹೇಳಿಕೆ ನೀಡಿದ್ದರು. ಆದರೆ ಹತ್ತು ದಿವಸ ಕಳೆದರೂ ಅದೇ ರಾಗವನ್ನು ಹಾಡುತ್ತಿರುವುದು ನಾಗರಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Related posts

Leave a Reply