Header Ads
Breaking News

ಜನರು ಇನ್ನೂ ನನ್ನ ಕೆಲಸಗಳನ್ನು ನೆನಪಲ್ಲಿಟ್ಟುಕೊಂಡಿದ್ದಾರೆ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹಿಂದೆ ಅನೇಕ ಮಂದಿ ಸಂಸದರಾಗಿ ಹೋಗಿದ್ದಾರೆ. ಇವರಲ್ಲಿ ಶ್ರೀನಿವಾಸ ಮಲ್ಯ, ಟಿಎ ಪೈ ಈ ಕ್ಷೇತ್ರಕ್ಕೆ ಮಾಡಿರುವ ಕೆಲಸ ಯಾರೂ ಮಾಡಲಿಕ್ಕೆ ಸಾಧ್ಯವಿಲ್ಲ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಈ ಬಗ್ಗೆ ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಸಂಸದನಾಗಿ ನನಗೆ ಸಿಕ್ಕ ಕಡಿಮೆ ಅವಧಿಯಲ್ಲೇ ಅತೀ ಹೆಚ್ಚು ಕೆಲಸ ಮಾಡಿರುವ ತೃಪ್ತಿ ಇದೆ. ಕ್ಷೇತ್ರದ ಜನರು ಇನ್ನೂ ನನ್ನ ಕೆಲಸಗಳನ್ನು ನೆನಪಲ್ಲಿಟ್ಟುಕೊಂಡಿದ್ದಾರೆ. ಸಾಧನೆಗಳ ಕುರಿತು ಬಹಿರಂಗ ಚರ್ಚೆಗೆ ವೇದಿಕೆ ಕಲ್ಪಿಸುವುದಾದರೆ ಎಲ್ಲರೂ ಬರಲಿ ನಾನು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳಿದ್ರು.
ಶೋಭಾ ಕರಂದ್ಲಾಜೆಯವರು ಹಿಂದೆ ಯಾವ ಸಂಸದರೂ ಮಾಡದ ಕೆಲಸವನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಾನು ಮಾಡಿದ್ದೇನೆ ಎಂಬ ಹೇಳಿಕೆಯ ಕುರಿತು ಅವರು ಮಾತನಾಡುತ್ತಾ, ಶೋಭಾ ಕರಂದ್ಲಾಜೆ ಎಲ್ಲಾ ಸಂಸದರ ಕುರಿತು ಹೇಳಿದ್ದಾರೋ ಅಥವಾ ನನ್ನೊಬ್ಬನ ಕುರಿತು ಹೇಳಿದ್ದಾರೊ ಎಂಬುದಾಗಿ ಸ್ಪಷ್ಟವಿಲ್ಲ. ನನ್ನೊಬ್ಬನ ಕುರಿತಾಗಿ ಹೇಳಿದ್ದರೆ ನಾನು ಮಾತ್ರ ಉತ್ತರ ಕೊಡಲು ಸಾಧ್ಯ ಎಂದು ಜೆಪಿ ಹೆಗ್ಡೆ ಹೇಳಿದರು.

ಎರಡು ವರ್ಷಗಳ ಅವಧಿಯಲ್ಲಿ ನನಗೆ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡಲಿಕ್ಕೆ ಸಿಕ್ಕಿರುವುದು ಒಂದು ವರ್ಷ ಎಂಟು ತಿಂಗಳು ಮಾತ್ರ. ನನಗೆ ಸಿಕ್ಕ ಅತ್ಯಂತ ಕಡಿಮೆ ಸಮಯದಲ್ಲೇ ಉಡುಪಿಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿದ್ದೇನೆ. ಅದರ ಆದೇಶ ಪ್ರತಿ ತೆಗೆದರೆ ಯಾರ ಅವಧಿಯಲ್ಲಿ ಮಂಜೂರಾಗಿದೆ ಎಂಬುವುದು ತಿಳಿಯುತ್ತೆ. ರಾಷ್ಟ್ರೀಯ ಹೆದ್ದಾರಿ, ಫ್ಲೈಓವರ್, ರೈಲ್ವೇ ನಿಲುಗಡೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಅನೇಕ ಬದಲಾವಣೆಗಳು, ಚಿಕ್ಕಮಗಳೂರಿನಲ್ಲಿ ಹೊಸ ರೈಲ್ವೇ ನಿಲ್ದಾಣ, ಪಾಸ್‌ಪೋರ್ಟ್ ಸೇವಾ ಕೇಂದ್ರ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದೇನೆ ಎಂದು ಜೆಪಿ ಹೆಗ್ಡೆ ತಮ್ಮ ಅವಧಿಯಲ್ಲಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಟಿಕೆಟ್ ನಿರಾಕರಣೆ ವಿಚಾರದಲ್ಲಿ ಬಂಟ ಸಮುದಾಯಕ್ಕೆ ನೋವಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಟಿಕೆಟ್ ನಿರಾಕರಣೆ ವಿಚಾರದಲ್ಲಿ ಬಂಟ ಸಮುದಾಯಕ್ಕೆ ಮಾತ್ರ ನೋವಾಗಿಲ್ಲ. ಎಲ್ಲಾ ಸಮುದಾಯದವರಿಗೂ ನೋವಾಗಿದೆ. ಅಂದಮಾತ್ರಕ್ಕೆ ನಾವು ಮನಸ್ಸಲ್ಲಿಟ್ಟುಕೊಂಡು ಕೊರಗುತ್ತಾ ಇರುವುದಕ್ಕಿಂತ ಮುಂದೇನು ಎನ್ನುವುದರ ಬಗ್ಗೆ ಆಲೋಚನೆ ಮಾಡಿಕೊಂಡು ಹೋಗಬೇಕು ಎಂದು ಹೆಗ್ಡೆ ಅಭಿಪ್ರಾಯಪಟ್ಟರು.

Related posts

Leave a Reply

Your email address will not be published. Required fields are marked *