Header Ads
Breaking News

ಜನಾರ್ದನ ಪೂಜಾರಿಯ ಆರೋಗ್ಯ ವೃದ್ಧಿಗಾಗಿ ದೇವರ ಮೊರೆ

ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿಯ ಆರೋಗ್ಯ ವೃದ್ಧಿಗಾಗಿ ಶ್ರೀ ಮೃತ್ಯುಂಜಯೇಶ್ವರ ದೇವರಿಗೆ ಕಾವು ಹೇಮನಾಥ್ ಶೆಟ್ಟಿ ದಂಪತಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೇಂದ್ರ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಯವರು ಶೀಘ್ರವಾಗಿ ಗುಣಮುಖರಾಗಲೆಂದು ದೇವರ ಪ್ರಾರ್ಥನೆ ಮಾಡಿದ್ರು. 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮತ್ತು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ದಂಪತಿಗಳ ನೇತೃತ್ವದಲ್ಲಿ ರಾಜ್ಯದ ಕಾರಣೀಕ ಕ್ಷೇತ್ರವೆನಿಸಿರುವ ಪುತ್ತೂರು ತಾಲೂಕಿನ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಸಿ ಮೃತ್ಯುಂಜಯ ಜಪ ಪಠಿಸಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಪೂಜೆಯನ್ನು ದೇವಸ್ಥಾನದ ಪ್ರದಾನ ಅರ್ಚಕರಾದ ರಮೇಶ್ ಬೈಪಾಡಿತ್ತಾಯ ಮತ್ತು ಸಹಾಯಕ ಅರ್ಚಕ ಶಿವಪ್ರಸಾದ್ ವಾರಂಬಳಿತ್ತಾಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯಪರಮೇಶ್ವರ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಮಹೇಶ್ ರೈ ಅಂಕೊತ್ತಿಮಾರ್,ವೇದನಾಥ ಸುವರ್ಣ, ಪುತ್ತೂರು ಪುರಸಭೆಯ ಮಾಜಿ ಉಪಾಧ್ಯಕ್ಷಲ್ಯಾನ್ಸಿ ಮಸ್ಕರೇನಸ್, ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *