Header Ads
Header Ads
Header Ads
Header Ads
Header Ads
Header Ads
Breaking News

ಜನೌಷಧ ಮಾರಾಟದಲ್ಲಿರುವ ಆರೋಪಕ್ಕೆ ಸತ್ಯಾಂಶವಿಲ್ಲ ?: ಡಾ| ಅನಿಲಾ ಹೇಳಿಕೆ

ಕೇಂದ್ರದ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎನ್ನುವ ಆರೋಪಗಳಿವೆ. ಆದರೆ ಇದರಲ್ಲಿ ಸತ್ಯಾಂಶವಿಲ್ಲ. ಜನೌಷಧ ಕೇಂದ್ರಗಳಿಗೆ ವಿತರಣೆಯಾಗುವ ಪ್ರತಿಯೊಂದು ಔಷಧವೂ ಮಂಗಳೂರು ಹಾಗೂ ಮೈಸೂರಿನ ವಿತರಕರಿಂದ ದೇಶಾದ್ಯಂತ ವಿತರಣೆಯಾಗುತ್ತಿದ್ದು, ಅವುಗಳ ಮೇಲೆ ಪಿಎಂಜೆ ಮುದ್ರೆ ಇದೆ ಎಂದು ರಾಜ್ಯ ಜನೌಷಧದ ನೋಡಲ್ ಅಧಿಕಾರಿ ಡಾ| ಅನಿಲಾ ತಿಳಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಧಾನ ಜನೌಷಧ ಕೇಂದ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಔಷಧಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಕೋ.ರೂ. ವ್ಯವಹಾರವಾಗುತ್ತಿದೆ ಎಂದು ತಿಳಿಸಿದರು.ದೇಶದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 2,600 ಪಿಎಂಜೆ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 540 ಕೇಂದ್ರಗಳಿವೆ. ಅವಿಭಜಿತ ದ.ಕ ಜಿಲ್ಲೆಯಲ್ಲಿನ ಕೇಂದ್ರಗಳು ಅತ್ಯಧಿಕ ಪ್ರಮಾಣದಲ್ಲಿ ಜನರಿಕ್ ಔಷಧಗಳನ್ನು ಖರೀದಿಸುತ್ತಿವೆ.ಔಷಧ ಗುಣಮಟ್ಟದ ಬಗ್ಗೆ ಸಾಕಷ್ಟು ಪರೀಕ್ಷೆಗಳಾಗಿವೆ ಯಾವುದೇ ಲೋಪ ಸಿಕ್ಕಿಲ್ಲ ಎಂದರು.

ಪ್ರಧಾನಮಂತ್ರಿ ಜನೌಷಧ ಕೇಂದ್ರದ ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕ ಹರೀಶ್ ಶರ್ಮ, ರಾಜ್ಯ ಮಾರುಕಟ್ಟೆ ಅಧಿಕಾರಿಗಳಾದ ಅಭಿಷೇಕ್, ಸಾಗರ್ ಸೇಜ್‍ಪಾಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *