Header Ads
Breaking News

ಜಮೀನಿನಲ್ಲಿ ಗಿಡಗಂಟಿ ಸ್ವಚ್ಚತೆ ಮಾಡುವ ವೇಳೆ ಕಾಣಿಸಿಕೊಂಡ ಹೆಬ್ಬಾವು; ಹುತ್ತದಿಂದ ಹೆಬ್ಬಾವನ್ನು ಹೊರ ತೆಗೆದ ಉರಗ ತಜ್ಞ ಗುರುರಾಜ್ ಸನಿಲ್

ಗಿಡಗಂಟಿಗಳಿದ್ದ ಜಮೀನನ್ನು ಸ್ವಚ್ಛತೆ ಮಾಡುವಂತಹ ಸಂದರ್ಭದಲ್ಲಿ ಹೆಬ್ಬಾವೊಂದು ಕಾಣಸಿಕ್ಕಿದೆ. ಉಡುಪಿ ಜಿಲ್ಲೆಯ ಪೆರ್ಡೂರು ವ್ಯಾಪ್ತಿಯಲ್ಲಿ ಸ್ಥಳೀಯರೊಬ್ಬರು ಮನೆ ನಿರ್ಮಾಣಕ್ಕಾಗಿ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಜಮೀನಿನಲ್ಲಿ ಹುತ್ತವೊಂದು ಇರುವುದನ್ನು ಮಾಲೀಕರು ನೋಡಿದ್ದಾರೆ. ಅದರೊಳಗೆ ಹಾವು ಇರಬಹುದು ಎಂದು ಸಂಶಯ ಪಟ್ಟಿದ್ದಾರೆ.

ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಜಮೀನಿನ ಮಾಲೀಕರು ತಕ್ಷಣ ಫೋನ್ ಕರೆ ಮಾಡಿದ್ದಾರೆ. ಗುರುರಾಜ್ ಸ್ಥಳಕ್ಕಾಗಮಿಸಿ ಹುತ್ತವನ್ನು ಪರಿಶೀಲನೆ ಮಾಡಿದ್ದಾರೆ. ಹುತ್ತದ ಒಳಗೆ ಹೆಬ್ಬಾವು ಇರುವುದು ಗುರುರಾಜ್ ಅವರ ಗಮನಕ್ಕೆ ಬಂದಿದೆ. ಜೆಸಿಬಿ ಕಾರ್ಯಾಚರಣೆಯನ್ನು ನಿಲ್ಲಿಸಿದ ಗುರುರಾಜ್ ತನ್ನ ಸಲಕರಣೆಯ ಮೂಲಕ ಹುತ್ತವನ್ನು ಅಗೆದಿದ್ದಾರೆ ಹುತ್ತದ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಹೊಂದಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಗುರುರಾಜ್ ಅವರು ಹೆಬ್ಬಾವನ್ನು ಹುತ್ತದಿಂದ ಹೊರಕ್ಕೆ ತೆಗೆದಿದ್ದಾರೆ. ಹುತ್ತದೊಳಗೆ ಬೇರೆ ಹಾವುಗಳು ಇದೆಯಾ ಎಂದು ಪರಿಶೀಲನೆ ಮಾಡಿದ ನಂತರ ಜೆಸಿಬಿ ಕಾರ್ಯಾಚರಣೆ ಮುಂದುವರಿದಿದೆ. ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಹೆಬ್ಬಾವುಗಳು ತನ್ನ ಪೊರೆಯನ್ನು ಕಳಚುತ್ತದೆ. ಈ ಪೊರೆ ಕಳಚುವ ಪ್ರಕ್ರಿಯೆ ಮಾಡಲು ಹಾವುಗಳು ಹುತ್ತವನ್ನು, ಜನವಸತಿ ಇಲ್ಲದ ಪ್ರದೇಶಗಳನ್ನು ಹುಡುಕುತ್ತಿರುತ್ತದೆ. ಬಳಿಕ ರಕ್ಷಣೆ ಮಾಡಿದ ಹೆಬ್ಬಾವನ್ನು ಅದೇ ಪರಿಸರದಲ್ಲಿ ಸುರಕ್ಷಿತವಾಗಿ ಬಿಟ್ಟು ಕಳುಹಿಸಲಾಗಿದೆ. ಜಮೀನನ್ನು ಸಮತಟ್ಟು ಮಾಡುವಾಗ ಕಟ್ಟಡಗಳನ್ನು ನಿರ್ಮಿಸುವಾಗ ಪೂಜೆಗಳನ್ನು ನೆರವೇರಿಸುವ ಬದಲು ಹುತ್ತದ ಒಳಗೆ ಹಾವುಗಳಿದ್ದರೆ ಅದನ್ನು ರಕ್ಷಿಸಬೇಕು ಎಂದು ಗುರುರಾಜ್ ಸಾರ್ವಜನಿಕರಿಗೆ ಸಲಹೆ ಕೊಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *