Header Ads
Breaking News

ಜಿಲ್ಲಾ ರೋಟರಿ ಸಮಿತಿ ನೇತೃತ್ವದಲ್ಲಿ ಜಲ ಸಂರಕ್ಷಣೆ ಬಗ್ಗೆ ಯೂಟ್ಯೂಬ್ ಚಾನೆಲ್

ದಕ್ಷಿಣ ಕನ್ನಡ ಜಿಲ್ಲಾ ರೋಟರಿ ಸಮಿತಿ ನೇತೃತ್ವದಲ್ಲಿ ಜಲ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಗೊಂಡಿದೆ. ಮಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇಂದು ಅಧಿಕೃತವಾಗಿ ಜಿಲ್ಲಾ ರೋಟರಿ ಗವರ್ನರ್ ರಂಗನಾಥ್ ಭಟ್ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಯೂ ಟ್ಯೂಬ್ ಚಾನೆಲ್ ಮೂಲಕ ಜಲ ಸಂರಕ್ಷಣೆ ಹಾಗೂ ನೀರು ಇಂಗಿಸುವ ವಿಚಾರಗಳ ಬಗ್ಗೆ ಜನತೆಗೆ ಮಾಹಿತಿಯನ್ನ ನೀಡಲಾಗುತ್ತದೆ ಅಂತಾ ಹೇಳಿದ್ರು.

ಯೂಟ್ಯೂಬ್ ಚಾನೆಲ್‍ನ ರೂವಾರಿ ಆಗಿರುವ ರಾಜೇಂದ್ರ ಕಲ್ಬಾವಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೀರು ಸಂರಕ್ಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಆಗತ್ಯವಿದೆ. ರೋಟರಿ ಸೇವಾ ಸಂಸ್ಥೆ ಈಗಾಗಲೇ ಜಿಲ್ಲೆಯಾದ್ಯಂತ ಜಲ ಸಂರಕ್ಷಣಾ ಕಾರ್ಯಗಳನ್ನ ಕೈಗೊಳ್ಳಲಾಗುತ್ತದೆ ಅಂತಾ ಹೇಳಿದ್ರು. ಈ ವೇಳೆ ಡಾ|ಶಿವ ಪ್ರಸಾದ್ ಮತ್ತು ಗೋಪಾಲಕೃಷ್ಣ ಶೆಟ್ಟಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *