Header Ads
Breaking News

ಜಿಲ್ಲೆಯಿಂದ ಮರಳು ಹೊರ ಹೋದರೆ ಕಠಿಣ ಕ್ರಮ : ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ

 ಹಲವು ವರ್ಷಗಳ ಕಾತರ ಹಾಗೂ ಬಾರೀ ಬೇಡಿಕೆ, ಹೋರಾಟದ ಫಲವಾಗಿ ಕೊನೆಗೂ ಮರಳುಗಾರಿಕೆ ಉಡುಪಿ ಜಿಲ್ಲೆಯಾದ್ಯಂತ ಆರಂಭವಾಗಿದ್ದು ಕಾರ್ಮಿಕರ ಪಾಲಿಗೆ ಸಂತಸ ತಂದಿದೆ. ಇನ್ನು ಜಿಲ್ಲೆಯ ಅಭಿವೃದ್ದಿ ವೇಗ ಪಡೆದುಕೊಳ್ಳುವ ಆಶಾ ಭವನೆ ವ್ಯಕ್ತಪಡಿಸಲಾಗುತ್ತಿದೆ.ಉಡುಪಿ ಜಿಲ್ಲಾದ್ಯಂತ ಕಳೆದೆರಡು ವರ್ಷಗಳಿಂದ ಮರೀಚಿಕೆಯಾಗಿದ್ದ ಮರಳು ಇದೀಗಾ ಜನರಿಗೆ ದೊರೆಯಲಾರಂಭಿಸಿದ್ದು ಸಿ.ಆರ್.ಝಡ್ ವ್ಯಾಪ್ತಿಯ ನದಿಯಿಂದ ಮರಳುಗಾರಿಕೆ (ಮರಳು ದಿಬ್ಬ ತೆರವು) ಆರಂಭವಾಗಿದೆ. ಈ ಮೂಲಕ ಕಳೇದ 2 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೊಂದು ಫಲ ಸಿಕ್ಕಿದಂತಾಗಿದೆ. ಈ ಮೂಲಕ ಮರಳುಗಾರಿಕೆ ಆರಂಭಕ್ಕಾಗಿ ಕಾಯುತ್ತಿದ್ದ ಬಡ ವರ್ಗದ ಜನರ ಮೊಗದಲ್ಲಿ ಮಂದಹಾಸ ಕಾಣಿಸಿದೆ. ಈಗಾಗಲೇ 170 ಜನರಿಗೆ ಮರಳುಗಾರಿಕೆ ನಡೆಸಲು ಅನುಮತಿ ನೀಡಿದ್ದು 12 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಇರುವ ಕಾರಣ ಅವರಿಗೆ ಅನುಮತಿ ಸಿಕ್ಕಿಲ್ಲ.ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿ ಗುರುತಿಸಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲಾಗಿದ್ದು ಒಟ್ಟು 150 ಮೆ.ಟನ್ನ ಷ್ಟು ಮರಳನ್ನು ಸಾಗಾಟ ಮಾಡಿಲಾಗಿದೆ . ಈಗಾಗಲೇ 170 ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆದಿದ್ದು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಮರಳು ಹೊರ ಹೋಗಲು ಅವಕಾಶ ಇಲ್ಲ. ಒಂದು ವೇಳೆ ಹೋಗಿದ್ದು ಗೊತ್ತಾದರೆ ಅವರ ಮೇಲೆ ಕಠಿನ ಕ್ರಮ ಕೈಗೊಳ್ಳುವ ಜೊತೆಗೆ ಪರವಾನಿಗೆ ರದ್ದು ಮಾಡುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಜಗದೀಶ್ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *