Breaking News

ಜಿ‌ಎಸ್‌ಟಿಯಿಂದ ಟ್ರ್ಯಾಕ್ಟರ್ ಮತ್ತು ಬಿಡಿ ಭಾಗ ಬೆಲೆಯೇರಿಕೆ, ಬೇಸಾಯಗಾರರ ಮೇಲೆ ಹೆಚ್ಚಿದ ಹೊರೆ

ಸರಕು ಮತ್ತು ಸೇವಾ ತೆರಿಗೆ ಜಿ‌ಎಸ್ಟಿ ಜಾರಿಯಿಂದ ಟ್ರ್ಯಾಕ್ಟರ್ ಹಾಗೂ ಅದರ ಬಿಡಿಭಾಗಗಳ ಬೆಲೆ ಹೆಚ್ಚಳವಾಗಲಿದ್ದು, ಬರದಿಂದ ಬಳಲಿರುವ ರೈತರಿಗೆ ಹೊಸ ಟ್ರ್ಯಾಕ್ಟರ್ ಕೊಳ್ಳುವುದು ಅಥವಾ ಈಗಿರುವ ಟ್ರ್ಯಾಕ್ಟರ್ಗೆ ಬಿಡಿ ಭಾಗಗಳನ್ನು ಖರೀದಿಸುವುದು ಹೆಚ್ಚಿನ ಹೊರೆಯಾಗಲಿದೆ.
ಟ್ರ್ಯಾಕ್ಟರ್ ಹಾಗೂ ಬಿಡಿ ಭಾಗಗಳಿಗೆ ಪ್ರಸ್ತುತ ಶೇ. ೫.೫ ತೆರಿಗೆ ಇದೆ. ಜಿ‌ಎಸ್ಟಿ ಜಾರಿಯಾದರೆ ಟ್ರ್ಯಾಕ್ಟರ್ ಮೇಲಿನ ತೆರಿಗೆ ಶೇ. ೧೨ಕ್ಕೆ ಹಾಗೂ ಬಿಡಿ ಭಾಗಗಳ ಮೇಲಿನ ತೆರಿಗೆಯು ಶೇ. ೨೮ಕ್ಕೆ ಹೆಚ್ಚಾಗಲಿದೆ. ಬಿಡಿ ಭಾಗಗಳಿಗೆ ಈಗಿರುವ ತೆರಿಗೆಗಿಂತ ನಾಲ್ಕು ಪಟ್ಟು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಇದಲ್ಲದೆ, ಹೊಸ ಟ್ರ್ಯಾಕ್ಟರ್ ಬೆಲೆಯಲ್ಲಿಯೂ ಕನಿಷ್ಠ ರೂ. ೪೦ ಸಾವಿರ ಹೆಚ್ಚಳ ಆಗಲಿದೆ. ಟ್ರ್ಯಾಕ್ಟರ್ಗಳ ಬಿಡಿ ಭಾಗಗಳ ತೆರಿಗೆ ಹೆಚ್ಚಳ ಆಗುವುದರಿಂದ ಟ್ರ್ಯಾಕ್ಟರ್ ಬೆಲೆಯಲ್ಲಿ ಹೆಚ್ಚಳ ಆಗಲಿದೆ. ಬೆಲೆ ಹೆಚ್ಚಳದ ಬಿಸಿ ನೇರವಾಗಿ ರೈತರ ಮೇಲೆ ಬೀಳಲಿದೆ. ಜೊತೆಗೆ ದುರಸ್ತಿ ವೆಚ್ಚವೂ ಹೆಚ್ಚಾಗಲಿದೆ ಎಂದು ಹುಬ್ಬಳ್ಳಿ ಟೊಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಹೇಳಿದೆ.
ಹೊಸ ಟ್ರ್ಯಾಕ್ಟರ್ ಮೇಲೆ ಮೊದಲು ಶೇ. ೨೮ರಷ್ಟು ಜಿ‌ಎಸ್ಟಿ ನಿಗದಿ ಮಾಡಲಾಗಿತ್ತು. ಅದನ್ನು ಪರಿಷ್ಕರಿಸಿ ಶೇ. ೧೨ಕ್ಕೆ ಇಳಿಸಲಾಗಿದೆ. ಆದರೂ, ಜಿ‌ಎಸ್ಟಿ ಜಾರಿಯಿಂದ ಪ್ರಸ್ತುತ ತೆರಿಗೆಗಿಂತ ಶೇ. ೬.೫ರಷ್ಟು ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಟ್ಯಾಫೆ ಸಂಸ್ಥೆಯ ಟ್ರ್ಯಾಕ್ಟರ್ ಡೀಲರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

Related posts

Leave a Reply