Header Ads
Breaking News

ಜೀವದ ಹಂಗು ತೊರೆದು ಸೇವೆ ನೀಡುತ್ತಿರುವ ವೆನ್ಲಾಕ್ ಕೋವಿಡ್ ಆಸ್ಪತ್ರೆ ಸಿಬ್ಬಂದಿ : ಅಂತರರಾಷ್ಟ್ರೀಯ ಶುಶ್ರೂಶಕರ ದಿನದ ಶುಭಾಶಯಗಳು

ಶುಶ್ರೂಷಾ ವೃತ್ತಿಯ ರೂವಾರಿ ಮಿಸ್ ಪ್ಲೋರೆನ್ಸ್ ನೈಟಿಂಗಲ್‍ರವರ ಜನ್ಮದಿನ. ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಶುಶ್ರೂಶಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ಕೊರೊನಾದಿಂದಾಗಿ ತಲ್ಲಣಿಸಿದ್ದು ಕೊರೊನಾ ರೋಗಿಗಳನ್ನು ಆರೈಕೆ ಮಾಡುವಲ್ಲಿ ದಾದಿಯರ ಶ್ರಮವೂ ಇದೆ. ಅವರಿಗೆ ಅಂತರಾಷ್ಟ್ರೀಯ ಶುಶ್ರೂಶಕರ ದಿನ ಶುಭಾಷಯಗಳು.

ಮೇ 12 1820ರಲ್ಲಿ ಮಿಸ್ ಪ್ಲೋರೆನ್ಸ್ ನೈಟಿಂಗಲ್ ಅವರು ಜನ್ಮತಾಳಿದರು. ಆಗ ಯುದ್ದದಲ್ಲಿ ಗಾಯಗೊಂಡ ಸೈನಿಕರ ಆರೈಕೆಗಾಗಿ ದೀಪವನ್ನು ಹಿಡಿದು ಸೇವೆಯಲ್ಲಿ ತೊಡಗಿದ್ದರು. ಅವರ ಕಾಲನಂತರ ಅವರ ಜನ್ಮದಿನದಂದು ರಾಷ್ಟ್ರೀಉ ಶುಶ್ರೂಷಕರ ದಿನವಾಗಿ ಆಚರಿಸಲಾಯಿತು. ಮೇ 12 2020ಕ್ಕೆ 200 ವರ್ಷದ ಹುಟ್ಟಿದ ಹಬ್ಬ. ಆದರೆ ಈಗಿನ ಮಹಾಯುದ್ಧದ ಬದಲಾಗಿ ಈಗ ಕೊರೊನಾ ರೋಗಿಗಳ ಆರೈಕೆಗೆ ನಮ್ಮ ಎಲ್ಲಾ ಶುಶ್ರೂಷಕರು ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿನ ಶುಶ್ರೂಕರು ತಮ್ಮ ಜೀವದ ಹಂಗು ತೊರೆದು ಸಂಸಾರ ಮಕ್ಕಳನ್ನು ಗಮನಿಸದೇ 24ಗಂಟೆಯೂ ಕೊರೊನಾ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿನ ಶುಶ್ರೂಕರ ತಂಡವು ಸರೋಜಿನಿ ಎಸ್ ರವರ ಮುಂದಾಳತ್ವದೊಂದಿಗೆ ಹಲವಾರು ನರ್ಸಿಂಗ್, ಸೂಪರ್ ವೈಸ್‍ಗಳು, ಹಿರಿಯ ಶಶ್ರೂಕರನ್ನು ಹೊಂದಿದೆ. ಶೇಕಡಾ 50ರಷ್ಟು ಶುಶ್ರೂಕರು 50ವರ್ಷದ ಮೇಲ್ಪಟ್ಟವರು ಸಹ ತಮಗಿರುವ ಅತೀ ರಕ್ತದೊತ್ತಡ, ಮಧುಮೇಹ, ಆರ್ಥೈಟಿಸ್ ಮುಂತಾದ ಎಲ್ಲಾ ಅವರವರ ಕಾಯಿಲೆಗಳನ್ನು ಕಡೆಗಣಿಸಿ ಕೊರೊನಾ ಆರೈಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಈ ಸೇವೆ ನಿಜಕ್ಕೂ ಅಭಿನಂದನೀಯ..

Related posts

Leave a Reply

Your email address will not be published. Required fields are marked *