Header Ads
Header Ads
Breaking News

ಜು.01ರಿಂದ ಹತ್ತು ದಿನಗಳ ಕಾಲ ನಡೆಯಲಿರುವ ‘ಡಾ.ಬಿ. ಸಿ. ರಾಯ್ ಆರೋಗ್ಯ ಶಿಬಿರ’ : ಮುಕ್ಕಾ ಶ್ರೀನಿವಾಸ ಆಸ್ಪತ್ರೆ

ಮಂಗಳೂರು: ಮುಕ್ಕಾದಲ್ಲಿರುವ ಶ್ರೀನಿವಾಸ ಆಸ್ಪತ್ರೆಯು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ‘ಡಾ. ಬಿ. ಸಿ. ರಾಯ್ ಆರೋಗ್ಯ ಶಿಬಿರ’ವನ್ನು ಜುಲೈ 1ರಿಂದ ಜು.1೦ರ ವರೆಗೆ ಹಮ್ಮಿಕೊಳ್ಳಲಾಗಿದೆ ಮುಕ್ಕಾದಲ್ಲಿರುವ ಶ್ರೀನಿವಾಸ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಡಾ. ಬಿ.ಸಿ. ರಾಯ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯು ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಶಿಬಿರದ ಪ್ರಯುಕ್ತ ಬ್ಯಾನರ್ ಬಿಡುಗಡೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿ.ಪಿ. ಸಿಂಗ್ ಅವರು ಮಾತನಾಡಿ ಹತ್ತು ದಿನಗಳ ಶಿಬಿರ ಜು. 01 ರಿಂದ 1೦ ರ ತನಕ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಶಿಬಿರವು ರಾಷ್ಟ್ರೀಯ ವೈದ್ಯರ ದಿನವನ್ನು ಸ್ಮರಣೀಯಗೊಳಿಸಲಿದೆ.ಶಿಬಿರದ ಅವಧಿಯಲ್ಲಿ ಆಸ್ಪತ್ರೆಯು ಸಾರ್ವಜನಿಕರಿಗೆ, ಹೊರರೋಗಿಗಳಿಗೆ ಉಚಿತ ಸಮಾಲೋಚನೆ ನೀಡಲಿದೆ. ರೋಗನಿರ್ಣಯ ಕಾರ್ಯವಿಧಾನಗಳು, ಅಗತ್ಯವಿದ್ದರೆ ವೆಚ್ಚದ ಮೇಲೆ ರಿಯಾಯಿತಿ ನೀಡಲಾಗುವುದು. ನೋಂದಣಿ ಉಚಿತ ನೀಡಲಾಗುವುದು. ಪೀಡಿಯಾಟ್ರಿಕ್ಸ್, ಸ್ತ್ರೀರೋಗ ಶಾಸ್ತ್ರ, ನೇತ್ರವಿಜ್ಞಾನ, ಇಎನ್‌ಟಿ, ಜನರಲ್ ಮೆಡಿಸಿನ್, ಆರ್ಥೋಪೆಡಿಕ್ಸ್, ಪಲ್ಮನರಿ ಮೆಡಿಸಿನ್, ಜನರಲ್ ಸರ್ಜರಿ ಮತ್ತು ಡರ್ಮಟಾಲಜಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *