Header Ads
Header Ads
Breaking News

ಜು. 22ರಿಂದ 29ರ ವರೆಗೆ ಬೆಳ್ಳಾರೆಯಲ್ಲಿ ಮದ್ಯವರ್ಜನ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಬೆಳ್ಳಾರೆಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ 1377 ನೇ ಮದ್ಯವರ್ಜನ ಶಿಬಿರ ಜು. 22 ರಿಂದ 29ರ ವರೆಗೆ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಳಂಜ ವಿಶ್ವನಾಥ ರೈ ಹೇಳಿದರು.

ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸುಳ್ಯ ತಾಲೂಕಿನಲ್ಲಿ 109 ಮದ್ಯವರ್ಜನ ಶಿಬಿರಗಳು ನಡೆದಿದೆ. ಈ ಶಿಬಿರಗಳಿಂದ ಸುಮಾರು 3313 ಕುಟುಂಟಗಳು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಯುವ ಜನಾಂಗ ಮದ್ಯಪಾನ, ಗಾಂಜಾ ಮುಂತಾದ ಅಮಲು ಪದಾರ್ಥಗಳಿಗೆ ದಾಸರಾಗುತ್ತಿದ್ದಾರೆ. ಇಗಾಗಿ ಜಾಗೃತಿ ಅಗತ್ಯ. ಇದಕ್ಕಾಗಿ ಪರಮಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮದ್ಯವರ್ಜನ ಶಿಬಿರಗಳು ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ರು. ಈ ಸಂದರ್ಭ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಎನ್.ಎ.ರಾಮಚಂಧ್ರ, ಧರ್ಮಸೃಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್, ಯೋಜನೆಯ ಬೆಳ್ಳಾರೆ ವಲಯ ಮೇಲ್ವಿಚಾರಕ ಮುರಳಿಧರ ಸುದ್ದಿಗೋರ್ಷಟಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *